Sunday, July 3, 2022
Home ಮನರಂಜನೆ ಆಸ್ಟ್ರೋ ಮೋಹನ್ ಕಲಾಕೃತಿ ಪುಸ್ತಕದಲ್ಲಿ ದಾಖಲು

ಆಸ್ಟ್ರೋ ಮೋಹನ್ ಕಲಾಕೃತಿ ಪುಸ್ತಕದಲ್ಲಿ ದಾಖಲು

ಆಸ್ಟ್ರೋ ಮೋಹನ್ ಕಲಾಕೃತಿ ಪುಸ್ತಕದಲ್ಲಿ ದಾಖಲು

(ಸುದ್ದಿಕಿರಣ ವರದಿ)
ಉಡುಪಿ: ದೇಶದ ಏಕೈಕ ಫೊಟೋಗ್ರಫಿ ಅಕಾಡೆಮಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ, ದೇಶದ ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಕಲಾಕೃತಿಗಳ ಪುಸ್ತಕ ಹೊರತರುತ್ತಿದ್ದು, ಆ ಸರಣಿಯಲ್ಲಿ ಕರ್ನಾಟಕ ರಾಜ್ಯದ ಏಕೈಕ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಪುಸ್ತಕ ಆಸ್ಟ್ರಲ್ ಕೊಲಾಜ್ ರೆಸೆಮ್ಲಿಂಗ್ ದಿ ಸ್ಟಾರ್ಸ್ ಪ್ರಕಟಗೊಳ್ಳುತ್ತಿದೆ. ಆ ಮೂಲಕ ಆಸ್ಟ್ರೋ ಕ್ಲಿಕ್ಕಿಸಿದ ಅಪೂರ್ವ ಛಾಯಾಚಿತ್ರಗಳು ಪುಸ್ತಕದಲ್ಲಿ ದಾಖಲಾಗುತ್ತಿದೆ.

ಆ. 19ರಂದು ವಿಶ್ವ ಛಾಯಾಗ್ರಹಣ ದಿನದಂದು ಈ ಕೃತಿಗಳ ಲೋಕಾರ್ಪಣೆಯಾಗಲಿದೆ.

ಕೆ. ಜಿ. ಮಹೇಶ್ವರಿ, ಡಾ. ಓ. ಪಿ. ಶರ್ಮ, ಶಿವಜೀ, ಮುಖೇಶ್ ಪರ್ಪಿಯಾನಿ ಮೊದಲಾದ ಪ್ರಸಿದ್ಧ ಛಾಯಾಚಿತ್ರ ಕಲಾವಿದರ ಕೃತಿಗಳೂ ಈ ಸರಣಿಯಲ್ಲಿ ಪ್ರಕಟವಾಗುತ್ತಿವೆ.

1965ರಲ್ಲಿ ಸ್ಥಾಪಿತವಾದ ಆಂಧ್ರಪ್ರದೇಶ ಫೋಟೋಗ್ರಫಿ ಅಕಾಡೆಮಿ ಛಾಯಾಚಿತ್ರ ಕಲಾವಿದರ ಒಳಿತಿಗಾಗಿ ಶ್ರಮಿಸುತ್ತಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!