Wednesday, July 6, 2022
Home ಮನರಂಜನೆ ಕಲಾ ಸಂಚಯ ಕೃತಿಗೆ ಬಹುಮಾನ

ಕಲಾ ಸಂಚಯ ಕೃತಿಗೆ ಬಹುಮಾನ

ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರ, 2020ನೇ ಸಾಲಿನ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನ ಪ್ರಕಟಿಸಿದ್ದು, ಇಲ್ಲಿನ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಕಟಿಸಿರುವ ಡಾ| ತಲ್ಲೂರು ಶಿವರಾಮ ಶೆಟ್ಟಿ ಅವರ ಕಲಾ ಸಂಚಯ: ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ಕೃತಿಗೆ ತೃತೀಯ ಬಹುಮಾನ ಲಭಿಸಿದೆ.

ಲೇಖಕ ಎಸ್. ಗುರುಮೂರ್ತಿ ಅವರ ಕದಂಬರು: ಸಮಗ್ರ ಅವಲೋಕನ ಕೃತಿಗೆ ಪ್ರಥಮ ಹಾಗೂ ಲೇಖಕ ಡಾ| ಅಮರೇಶ ಯತಗಲ್ ಅವರ ಸಾರ್ಥಕ ಬದುಕು ಕೃತಿಗೆ ದ್ವಿತೀಯ ಪ್ರಶಸ್ತಿ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಡಾ| ತಲ್ಲೂರು ಶಿವರಾಮ ಶೆಟ್ಟಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಸಂಸ್ಕಾರ ಬಿತ್ತಬೇಕು ಎಂಬ ಆಶಯದೊಂದಿಗೆ ಮುಂಬೆಳಕು, ಹೊಂಬೆಳಕು, ಪಾಥೇಯ, ಹೊಂಗಿರಣ, ಪಥ ದೀಪಿಕಾ ಮೊದಲಾದ ಅನೇಕ ಕೃತಿಗಳನ್ನು ಸ್ವತಃ ರಚಿಸಿ, ಪ್ರಕಟಿಸಿದ್ದು ಮಾತ್ರವಲ್ಲದೆ ಅನ್ಯ ಲೇಖಕರ ‘ದಾರಿ ದೀಪ’, `ಬಾಳ ಬೆಳಕು’ ಮತ್ತು `ಭಗವದ್ಗೀತೆ’ ಗ್ರಂಥಗಳನ್ನು ಪ್ರಕಟಿಸಿ ಜಿಲ್ಲೆಯ 200ಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ 20 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!