Friday, January 28, 2022
Home ಮನರಂಜನೆ ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಕೊಂಕಣಿ ಮಾನ್ಯತಾ ದಿವಸ್ ಆಚರಣೆ

ಕೊಂಕಣಿ ಮಾನ್ಯತಾ ದಿವಸ್ ಆಚರಣೆ

(ಸುದ್ದಿಕಿರಣ ವರದಿ)
ಉಡುಪಿ: ಕೊಂಕಣಿ ನಾಟಕ ಸಭಾ ಮಂಗಳೂರು ಹಾಗೂ ಉಡುಪಿ ಕೆಥೊಲಿಕ್ ಸಭಾ ಆಶ್ರಯದಲ್ಲಿ ಶುಕ್ರವಾರ ಇಲ್ಲಿನ ಶೋಕಮಾತಾ ಇಗರ್ಜಿ ಆವರಣದ ಬಿಷಪ್ ಹೌಸ್ ಸಭಾಂಗಣದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮ ನಡೆಯಿತು.

ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫಾ| ಚೇತನ್, 1992ರ ಆ. 20ರಂದು ಕೊಂಕಣಿ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಿದ ದಿನವಾಗಿದ್ದು, ಅಂದಿನಿಂದ ಈ ದಿನವನ್ನು ಕೊಂಕಣಿ ಮಾನ್ಯತಾ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೊಂಕಣಿ ಭಾಷಾಭಿಮಾನಿ ನೆಲೆಯಲ್ಲಿ ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲು ಅವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಹಿರಿಯ ಕೊಂಕಣಿ ಸಾಹಿತಿ, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿ’ಕುನ್ಹಾ ತಾಕೊಡೆ ಅವರ ಕವನ ಸಂಕಲನ ಮೊಂವ್ ನ್ನು ಉಡುಪಿ ಕೆಥೊಲಿಕ್ ಸಭಾ ಅಧ್ಯಕ್ಷೆ ಮೇರಿ ಡಿ’ಸೋಜ ಅನಾವರಣಗೊಳಿಸಿದರು.

ಸಾಹಿತ್ಯ ಭಾಷೆಯ ಬೆನ್ನೆಲುಬು. ಪುಸ್ತಕ ಪ್ರಕಟಣೆ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಭಾಷಾ ಬೆಳವಣಿಗೆಗೆ ಪೂರಕ ಎಂದರು.

ಕೊಂಕಣಿ ನಾಟಕ ಸಭಾ ಅಧ್ಯಕ್ಷ ಫಾ| ಪಾವ್ಲ್ ಮೆಲ್ವಿನ್ ಡಿ’ಸೋಜ ಸ್ವಾಗತಿಸಿದರು, ಉಪಾಧ್ಯಕ್ಷ ಲಿಸ್ಟನ್ ಡಿ’ಸೋಜ ವಂದಿಸಿದರು. ಪತ್ರಕರ್ತ ರೇಮಂಡ್ ಡಿ’ಕುನ್ಹಾ ನಿರೂಪಿಸಿದರು.

ಕೆಥೊಲಿಕ್ ಸಭಾ ಮಾಜಿ ಅಧ್ಯಕ್ಷ ಜೆರ್ರಿ ನಿಡ್ಡೋಡಿ, ಅಲ್ವಿನ್ ಕ್ವಾಡ್ರಸ್, ಫಾ| ಜಾನ್ಸನ್, ಜೆರಿ ಕೊನ್ಸೆಸೊ, ಜೊಸ್ಸಿ ಥಿಯೊದರ್, ಜೋಸೆಫ್ ಪಿಂಟೊ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!