Wednesday, July 6, 2022
Home ಮನರಂಜನೆ ಗೀತ ತರಬೇತಿಗೆ ಚಾಲನೆ

ಗೀತ ತರಬೇತಿಗೆ ಚಾಲನೆ

ಉಡುಪಿ: ನೃತ್ಯನಿಕೇತನ ಕೊಡವೂರು ಮತ್ತು ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಸುಗಮ ಸಂಗೀತ, ಭಾವಗೀತೆ ಹಾಗೂ ರಂಗಗೀತೆಗಳ ಮೂರು ದಿನಗಳವಧಿಯ ತರಬೇತಿ ಶಿಬಿರವನ್ನು ರಂಗಕರ್ಮಿ, ಸಂಗೀತ ನಿರ್ದೇಶಕ ಗುರುರಾಜ ಮಾರ್ಪಳ್ಳಿ ನೆರವೇರಿಸಿದರು.

ಹೊಸತನದ ಪ್ರಯತ್ನದೊಂದಿಗೆ ಯಾರೂ ಇದುವರೆಗೂ ಆಯ್ದುಕೊಳ್ಳದ ಅಜ್ಞಾತ ಕವಿಗಳ ಹಾಡುಗಳನ್ನು ಆಯ್ಕೆ ಮಾಡಿ ಅದಕ್ಕೆ ರಾಗ ಸಂಯೋಜನೆ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಅದನ್ನು ತಲುಪಿಸುವ ಪ್ರಯತ್ನ ಮಾಡಬೇಕು ಎಂದರು.

ವಿಶ್ರಾಂತ ಪ್ರಾಚಾರ್ಯ, ವಿಮರ್ಶಕ ಪ್ರೊ| ಮುರಳೀಧರ ಉಪಾಧ್ಯ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಉದ್ಯಮಿ ವಿಶ್ವನಾಥ ಶೆಣೈ, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅಭ್ಯಾಗತರಾಗಿದ್ದರು.

ಭಾವನ ಕೆರೆಮಠ ನಿರೂಪಿಸಿದರು. ವಿದ್ವಾನ್ ಸುಧೀರ್ ಕೊಡವೂರು ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!