Monday, July 4, 2022
Home ಮನರಂಜನೆ ತುಳು ಭಾಷೆಗೆ ಮಾನ್ಯತೆ: ರಾಷ್ಟ್ರಪತಿ ಗಮನಕ್ಕೆ ತರಲು ಆಗ್ರಹ

ತುಳು ಭಾಷೆಗೆ ಮಾನ್ಯತೆ: ರಾಷ್ಟ್ರಪತಿ ಗಮನಕ್ಕೆ ತರಲು ಆಗ್ರಹ

ತುಳು ಭಾಷೆಗೆ ಮಾನ್ಯತೆ: ರಾಷ್ಟ್ರಪತಿ ಗಮನಕ್ಕೆ ತರಲು ಆಗ್ರಹ

(ಸುದ್ದಿಕಿರಣ ವರದಿ)
ಉಡುಪಿ: ತುಳು ಭಾಷೆಗೆ ಕರ್ನಾಟಕ ರಾಜ್ಯದಲ್ಲಿ ಅಧಿಕೃತ ಸ್ಥಾನಮಾನ ನೀಡುವಂತೆ ಹಾಗೂ ಈ ವಿಷಯವನ್ನು ಆರ್ಟಿಕಲ್ 347ರ ಪ್ರಕಾರ ರಾಷ್ಟ್ರಪತಿಗಳ ಗಮನಕ್ಕೆ ತರುವಂತೆ ಈಚೆಗೆ ಉಡುಪಿಗೆ ಆಗಮಿಸಿದ್ದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಜೈ ತುಳುನಾಡ್ ಸಂಘಟನೆ ಪರವಾಗಿ ಸದಸ್ಯೆ ಅಕ್ಷತಾ ಕುಲಾಲ್ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಸಚಿವೆ ಶೋಭಾ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕ ಕೆ. ರಘುಪತಿ ಭಟ್, ತುಳು ಭಾಷೆ ರಾಜ್ಯದ ಅಧಿಕೃತ ಭಾಷೆಯಾಗಬೇಕು ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಎ. ಸುವರ್ಣ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಉಮೇಶ್ ಆಚಾರ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆ ಕೇಸರಿ ಯುವರಾಜ್, ಜೈ ತುಳುನಾಡ್ ಸಂಘಟನೆಯ ತುಲು ಲಿಪಿ ಮೇಲ್ವಿಚಾರಕ ಶರತ್ ಕೊಡವೂರು, ನಗರ ಬಿ.ಜೆ.ಪಿ ಉಪಾಧ್ಯಕ್ಷೆ ಸರೋಜಾ ಶೆಣೈ, ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಜೈ ತುಳುನಾಡ್ ಸಂಘಟನೆ ಸದಸ್ಯ ಸಂತೋಷ್ ಎಸ್. ಎನ್., ತುಳು ಲಿಪಿ ಶಿಕ್ಷಕಿಯರಾದ ಸ್ವಾತಿ ಸುವರ್ಣ, ಶಿಲ್ಪಾ ಕೇಶವ್, ಸುಶೀಲಾ ಜಯಕರ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!