ಉಡುಪಿ, ಜು. 11 (ಸುದ್ದಿಕಿರಣ ವರದಿ): ರಾಷ್ಟ್ರೀಯ ಸ್ವಯಂಸೇವಕ ಸಂಘ ಜಿಲ್ಲಾ ಸಂಘಚಾಲಕ ಹಾಗೂ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಪ್ರಾಧ್ಯಾಪಕ ನಾರಾಯಣ ಶೆಣೈ ವಿರಚಿತ ಛತ್ರಪತಿ ಶಿವಾಜಿ ಮಹಾರಾಜ್ ಜೀವನಾಧಾರಿತ ಕೃತಿ ಧ್ಯೇಯ ಜೀವಿ ಸಮ್ರಾಟ ಕೃತಿಯನ್ನು ಈಚೆಗೆ ಇಲ್ಲಿನ ತೆಂಕಪೇಟೆ ಸಂಸ್ಕೃತ ಭಾರತೀ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಕಾರ್ಯಕರ್ತ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ, ಲೆಕ್ಕಪರಿಶೋಧಕ ಗುಜ್ಜಾಡಿ ಪ್ರಭಾಕರ ನಾಯಕ್ ಅನಾವರಣಗೊಳಿಸಿದರು.
ಸಂಘದ ಕಾರ್ಯಕರ್ತ, ವಾಗ್ಮಿ ಪ್ರಕಾಶ್ ಮಲ್ಪೆ ಪುಸ್ತಕ ಪರಿಚಯಿಸಿದರು. ಲೇಖಕ ನಾರಾಯಣ ಶೆಣೈ ಸ್ವ ಅನುಭವ ಹೇಳಿದರು.
ಸಂಸ್ಕೃತ ಭಾರತೀ ಉಡುಪಿ ಜಿಲ್ಲಾಧ್ಯಕ್ಷ, ವಿಶ್ರಾಂತ ಪ್ರಾಧ್ಯಾಪಕ ಶ್ರೀಧರ ಆಚಾರ್ಯ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಕೃತ ಭಾರತಿ ಉಡುಪಿ ಜಿಲ್ಲಾ ಸಂಯೋಜಕ ನಟೇಶ ವೈ. ಆರ್. ನಿರೂಪಿಸಿದರು. ಉಪಾಧ್ಯಕ್ಷೆ ಸುಧಾ ಶೆಣೈ ಸ್ವಾಗತಿಸಿ, ಮಮತಾ ವಂದಿಸಿದರು.