Thursday, July 7, 2022
Home ಮನರಂಜನೆ ನಾಟಕಗಳಿಂದ ಜನ ಮನ ಪರಿವರ್ತನೆ

ನಾಟಕಗಳಿಂದ ಜನ ಮನ ಪರಿವರ್ತನೆ

ಉಡುಪಿ: ನಾಟಕಗಳಿಂದ ಜನರು ಮತ್ತು ಅವರ ಮನಸ್ಸನ್ನು ಪರಿವರ್ತನೆ ಮಾಡಲು ಸಾಧ್ಯ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.

ಸುಮನಸಾ ಕೊಡವೂರು ಆಶ್ರಯದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಆರಂಭಗೊಂಡ ರಂಗಹಬ್ಬ ನಾಟಕೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿಗೆ ಸುದೀರ್ಘ ಇತಿಹಾಸ ಇದೆ. ಈಚಿನ ದಿನಗಳಲ್ಲಿ ರಂಗಭೂಮಿ ಸಂಖ್ಯೆ ಕಡಿಮೆ ಆಗಿದ್ದರೂ ನೀನಾಸಂನಂಥ ಸಂಸ್ಥೆಗಳ ನಾಟಕಗಳು ಜನತೆಯನ್ನು ಆಕರ್ಷಿಸುವಲ್ಲಿ ಯಶ ಸಾಧಿಸುತ್ತಿವೆ ಎಂದರು.

ಸುಮನಸಾ ಸಂಸ್ಥೆ ನಾಟಕ ಪ್ರಯೋಗಗಳೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿರುವುದು ಸಂತೋಷದಾಯಕ ಎಂದರು.

ಅಭ್ಯಾಗತರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ತಮ್ಮ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ರಂಗ ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದರು.

ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿಗಳಾದ ಆನಂದ ಸುವರ್ಣ, ದಿವಾಕರ ಸನಿಲ್ ಮತ್ತು ನಾಗರಾಜ ಸುವರ್ಣ, ಅಂಬಲಪಾಡಿ ಗ್ರಾ. ಪಂ. ಅಧ್ಯಕ್ಷ ಲಕ್ಷ್ಮಣ ಪೂಜಾರಿ ಅಭ್ಯಾಗತರಾಗಿದ್ದರು. ಸುಮನಸಾ ಅಧ್ಯಕ್ಷ ಪ್ರಕಾಶ ಜಿ. ಕೊಡವೂರು, ಸಂಚಾಲಕ ಭಾಸ್ಕರ ಪಾಲನ್ ಇದ್ದರು.

ಸಂಸ್ಥೆ ಗೌರವಾಧ್ಯಕ್ಷ ಎಂ. ಎಸ್. ಭಟ್ ಸ್ವಾಗತಿಸಿದರು. ಅಕ್ಷತ್ ಅಮೀನ್ ನಿರೂಪಿಸಿದರು. ಕಾರ್ಯದರ್ಶಿ ಜೀವನ್ ಕುಮಾರ್ ವಂದಿಸಿದರು.

ಈ ಸಂದರ್ಭದಲ್ಲಿ ಸುಕುಮಾರ್ ಮುದ್ರಾಡಿ ಅವರಿಗೆ ರಂಗಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಭೂಮಿಗೀತ ಪಟ್ಲ ತಂಡದವರಿಂದ ಗೆಲಿಲಿಯೊ ನಾಟಕ ಪ್ರದರ್ಶನಗೊಂಡಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!