Wednesday, August 10, 2022
Home ಮನರಂಜನೆ ನಿಡಂಬೂರುಶ್ರೀ ಪ್ರಶಸ್ತಿಗೆ ಆಯ್ಕೆ

ನಿಡಂಬೂರುಶ್ರೀ ಪ್ರಶಸ್ತಿಗೆ ಆಯ್ಕೆ

ಉಡುಪಿ: ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಕ್ಷೇತ್ರಾಧಿಕಾರಿ ಡಾ. ನಿ. ಬೀ. ವಿಜಯ ಬಲ್ಲಾಳ್ ತಮ್ಮ ತೀರ್ಥರೂಪರಾದ ದಿ| ಅಣ್ಣಾಜಿ ಬಲ್ಲಾಳ್ ಸ್ಮರಣಾರ್ಥ ನೀಡುವ ಈ ಬಾರಿಯ ನಿಡಂಬೂರುಶ್ರೀ ಪ್ರಶಸ್ತಿಗೆ ಹಿರಿಯ ವಯಲಿನ್ ವಾದಕಿ, ಕಿದಿಯೂರು ವಸಂತಿ ರಾಮ ಭಟ್ ಆಯ್ಕೆಯಾಗಿದ್ದಾರೆ.

ನಿಡಂಬೂರು ಮಾಗಣೆಯ ಹಿರಿಯ ಸಾಧಕರಿಗೆ ನೀಡಲ್ಪಡುವ ಈ ಪ್ರಶಸ್ತಿಯನ್ನು ಡಾ. ನಿಡಂಬೂರು ಬೀಡು ವಿಜಯ ಬಲ್ಲಾಳ ಸ್ಥಾಪಿಸಿದ್ದು, ಈ ತಿಂಗಳ 11ರಂದು ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ನಡೆಯುವ ದಿನಪೂರ್ತಿ ಮಧೂರ ಮಾಧುರ್ಯ ಸಮಾರಂಭದಲ್ಲಿ ಅಪರಾಹ್ನ 3 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ. ವಿಜಯ ಬಲ್ಲಾಳ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!