Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ `ನಿರಂತರ್' ನಾಟಕೋತ್ಸವಕ್ಕೆ ಚಾಲನೆ

`ನಿರಂತರ್’ ನಾಟಕೋತ್ಸವಕ್ಕೆ ಚಾಲನೆ

ಸುದ್ದಿಕಿರಣ ವರದಿ
ಶನಿವಾರ, ಫೆಬ್ರವರಿ 12

ನಿರಂತರ್ ನಾಟಕೋತ್ಸವಕ್ಕೆ ಚಾಲನೆ
ಉಡುಪಿ: ಕಲೆ, ಸಾಹಿತ್ಯ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆಯ ನಾಲ್ಕನೇ ವರ್ಷದ 3 ದಿನಗಳ ನಿರಂತರ್ ನಾಟಕೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ವಂ. ಸ್ಟ್ಯಾನಿ ಬಿ. ಲೋಬೊ, ಕೊಂಕಣಿ ಸಂಗೀತ ಸಾಧನ ಗುಮಟ್ ಬಾರಿಸುವುದರೊಂದಿಗೆ ನಾಟಕೋತ್ಸವಕ್ಕೆ ಚಾಲನೆ ನೀಡಿದರು.

ಕಳೆದ ಮೂರು ವರ್ಷದಿಂದ ವಿವಿಧ ನಾಟಕಗಳ ಮೂಲಕ ಕಲೆಯ ರುಚಿಯನ್ನು ಈ ಸಂಸ್ಥೆ ನೀಡಿದ್ದು, ಅದರಿಂದ ನಮ್ಮ ಅರಿವು ಹೆಚ್ಚಾಗಿದೆ.

ನಾಟಕ ಉತ್ತಮ ಮಾಧ್ಯಮವಾಗಿದ್ದು, ಬರಹಗಾರ ಮತ್ತು ನಾಟಕಕಾರ ತಮ್ಮ ಕಲೆಯ ಮೂಲಕ ಸಮಾಜದ ಮೇಲೆ ತಮ್ಮ ಪ್ರಭಾವ ಬೀರುತ್ತಾರೆ. ಸಮಾಜದಲ್ಲಿ ನಡೆಯುವ ಸರಿ ತಪ್ಪುಗಳನ್ನು ನಾಟಕಕಾರ ನಟನೆಯ ಮೂಲಕ ಸಮಾಜದ ಬದಲಾವಣೆಗೆ ಕಾರಣವಾಗುತ್ತಾರೆ. ಇಂಥ ನಾಟಕೋತ್ಸವಗಳ ಮೂಲಕ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದು. ಇಂಥ ಸಂಘಟನೆಗಳಿಗೆ ಕಲಾಭಿಮಾನಿಗಳು ಸಹಕಾರ ನೀಡುವುದರಿಂದ ಸಮಾಜ ಬೆಳೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿದ್ದ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಗೋಡ್ಫ್ರಿ ಡಿ’ಸೋಜ ಶುಭ ಹಾರೈಸಿದರು.

ನಾಟಕೋತ್ಸವ ಸಂಚಾಲಕ ರೊನಾಲ್ಡ್ ಡಿ’ಸೋಜ, ಕಾರ್ಯದರ್ಶಿ ಒಲಿವೆರಾ ಮಥಾಯಸ್ ವೇದಿಕೆಯಲ್ಲಿದ್ದರು.

ನಿರಂತರ್ ಅಧ್ಯಕ್ಷ ಸ್ಟೀವನ್ ಕುಲಾಸೊ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ರೋಶನ್ ಕ್ರಾಸ್ತಾ ನಿರೂಪಿಸಿದರು.

ಮೊದಲ ದಿನದ ನಾಟಕವನ್ನು 600ಕ್ಕೂ ಹೆಚ್ಚು ಕಲಾಭಿಮಾನಿಗಳು ವೀಕ್ಷಿಸಿದರು.
ಉದ್ಯಾವರದ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ರಂಗ ಮಂಟಪದಲ್ಲಿ 3 ದಿನಗಳಲ್ಲಿ 4 ಕೊಂಕಣಿ ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಮೊದಲ ದಿನ ರಾಯಾಚಿ ಮುಸ್ತಾಯ್ಕಿ ಮತ್ತು ಮುಜ್ಯಾ ಪುತಾಚೊ ಕಿಣ್ಕುಳೊ ಪ್ರದರ್ಶನಗೊಂಡರೆ, ದ್ವಿತೀಯ ದಿನ ಡೆನಿಸ್ ಮೊಂತೆರ್ ನಿರ್ದೇಶನದ ಅಸ್ತಿತ್ವ ತಂಡದ ಕಲಾವಿದರು ಪ್ರಸ್ತುತಪಡಿಸುತ್ತಿರುವ ಹಾಂಡೊ ಉಟ್ಲಾ ಮತ್ತು ಕೊನೆಯ ದಿನ ಕ್ರಿಸ್ಟಿ ನೀನಾಸಂ ನಿರ್ದೇಶನದ ಅಸ್ತಿತ್ವ ತಂಡದಿಂದ ಸಂಪದ್ಲೆ ನಾಟಕ ಪ್ರದರ್ಶನಗೊಳ್ಳಲಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!