Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 11, 2022

ಪರ್ಯಾಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ಉಡುಪಿ: ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾರತೀಯ ಜೀವವಿಮಾ ನಿಗಮ (ಎಲ್.ಐ.ಸಿ.) ಉಡುಪಿ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಬಿಂದು ರಾಬರ್ಟ್ ಮಂಗಳವಾರ ರಥಬೀದಿಯ ಪೂರ್ಣಪ್ರಜ್ಞ ವೇದಿಕೆಯಲ್ಲಿ ಉದ್ಘಾಟಿಸಿದರು.

ತದನಂತರದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣನ ಸಂದೇಶದಂತೆ ಪ್ರಜೆಗಳ ಯೋಗ- ಕ್ಷೇಮಗಳಲ್ಲಿ ಉಡುಪಿಯ ಜನತೆಯೊಂದಿಗೆ ಎಲ್.ಐ.ಸಿ. ಯಾವತ್ತೂ ಸಹಭಾಗಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ವಿಭಾಗದ ಮಾರಾಟ ಅಧಿಕಾರಿ ರಮೇಶ್ ಭಟ್ ಹಾಗೂ ಉಡುಪಿ ವಿಭಾಗ ಮಾರುಕಟ್ಟೆ ಪ್ರಬಂಧಕ ಶ್ಯಾಮಸುಂದರ್ ಇದ್ದರು.

ಪರ್ಯಾಯೋತ್ಸವ ಸಮಿತಿ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ಪ್ರೊ. ಎಂ. ಎಲ್. ಸಾಮಗ ಸ್ವಾಗತಿಸಿ, ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ವಂದಿಸಿದರು.

ಹರಿಕಥೆ
ಬಳಿಕ ಭಾವನಾ ಮಂಜಿತ್ತಾಯ ಕೆರೆಮಠ ಅವರಿಂದ ಹರಿಕಥೆ ನಡೆಯಿತು.

ವಯಲಿನ್ ವಾದನ
ಶ್ರೇಷ್ಠ ಮತ್ತು ಬಳಗ ಉಡುಪಿ ಅವರಿಂದ ವೇಣುವಾದನ ಮತ್ತು ವಯಲಿನ್ ವಾದನ ಕಛೇರಿ ನಡೆಯಿತು.

ಭಕ್ತಿ ಸಂಗೀತ
ಹೇಮಲತಾ ಎ. ರಾವ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ನಡೆಯಿತು

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!