ಹಲಸಿನ ಎಲೆಯಲ್ಲಿ ದುರ್ಗೆಯ ಚಿತ್ರ ರಚನೆ
(ಸುದ್ದಿಕಿರಣ ವರದಿ)
ಕಟೀಲು: ಪಕ್ಷಿಕೆರೆ ಪ್ರತಾಪ್ ಆಚಾರ್ಯ ಹಲಸಿನ ಎಲೆಯನ್ನು ಕೊರೆದು ಕಟೀಲಿನ ಆರಾಧ್ಯಮೂರ್ತಿ ಶ್ರೀ ದುರ್ಗಾಪರಮೇಶ್ವರಿ ಭಾವಚಿತ್ರ ಚಿತ್ರಿಸಿ, ಸೋಣ ಶುಕ್ರವಾರದಂದು ಶ್ರೀದೇವಸ್ಥಾನಕ್ಕೆ ತಂದು ದೇವಿಗೆ ಒಪ್ಪಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆನುವಂಶಿಕ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಸದಾನಂದ ವೆಂಕಟೇಶ ಆಸ್ರಣ್ಣ ಮತ್ತು ಶ್ರೀಕರ ಆಸ್ರಣ್ಣ ಇದ್ದರು.
ಈ ಅಪೂರ್ವ ಕಲಾಕೃತಿಯನ್ನು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗುವುದು.
ಕಟೀಲು ಕಾಲೇಜಿನ ಪೂರ್ವಿದ್ಯಾರ್ಥಿಯೂ ಆಗಿರುವ ಕಲಾವಿದ ಪ್ರತಾಪ್ ಆಚಾರ್ಯ ಅವರನ್ನು ಶ್ರೀದೇವಿಯ ಶೇಷವಸ್ತ್ರ ನೀಡಿ ಗೌರವಿಸಲಾಯಿತು