Tuesday, May 17, 2022
Home ಮನರಂಜನೆ ವೇಣುಲೋಲನ ಸನ್ನಿಧಿಯಲ್ಲಿ ಅಷ್ಟವಿಂಶತಿ ವೀಣಾವಾದನ

ವೇಣುಲೋಲನ ಸನ್ನಿಧಿಯಲ್ಲಿ ಅಷ್ಟವಿಂಶತಿ ವೀಣಾವಾದನ

ಉಡುಪಿ: ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ಡಾ. ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಮಣಿಪಾಲ ಪ್ರಸ್ತುತಪಡಿಸುವ ಪ್ರಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂದರ್ಭ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಕಲಾಸ್ಪಂದನ ನಿರ್ದೇಶಕಿ ಪಾವನಾ ಬಾಲಚಂದ್ರ ಆಚಾರ್ಯ ನೇತೃತ್ವದಲ್ಲಿ ಏಕಕಾಲದಲ್ಲಿ 28 ಮಂದಿಯಿಂದ ವೀಣಾವಾದನ ಕಛೇರಿ ನಡೆಯಿತು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ವೀಣೆಯನ್ನು ವಿವಿಧ ದೇವತಾ ಸ್ವರೂಪಗಳಾಗಿ ತಿಳಿದುಕೊಂಡು ಇದೂ ಒಂದು ದೇವರ ಪೂಜೆ ಎಂದು ಆರಾಧಿಸುತ್ತಿರುವ ಕಲಾಸ್ಪಂದನದ ಸದಸ್ಯರು ತಮ್ಮ ಸಂಸ್ಥೆಯ ರಜತ ವರ್ಚಾಚರಣೆ ಸಂದರ್ಭದಲ್ಲಿ ಕಲಾರಾಧನೆ ಮಾಡುತ್ತಿರುವುದು ದೇವರಿಗೆ ಪ್ರೀತಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸಂಸ್ಥೆಯ ನಿರ್ದೇಶಕರಾದ ಪಾವನಾ ಬಾಲಚಂದ್ರ ಆಚಾರ್ಯ ದಂಪತಿ ಪಾಲ್ಗೊಂಡಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!