Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ 'ಬದ್ಕೆರೆ ಬುಡ್ಲೆ ಪ್ಲೀಸ್' ಮುಹೂರ್ತ

‘ಬದ್ಕೆರೆ ಬುಡ್ಲೆ ಪ್ಲೀಸ್’ ಮುಹೂರ್ತ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಬದ್ಕೆರೆ ಬುಡ್ಲೆ ಪ್ಲೀಸ್ ಮುಹೂರ್ತ
ಉಡುಪಿ: ಕೊಡವೂರು ಸುಮನಸಾ ರಂಗ ತಂಡದ ಈ ವರ್ಷದ ಹೊಸ ನಾಟಕ ಬದ್ಕೆರೆ ಬುಡ್ಲೆ ಪ್ಲೀಸ್ ನಾಟಕದ ಮುಹೂರ್ತ ಭಾನುವಾರ ಕೊಡವೂರು ಶ್ರೀ  ಶಂಕರ ನಾರಾಯಣ ದೇವಸ್ಥಾನದಲ್ಲಿ ನಡೆಯಿತು.

ಶ್ರೀದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮುಹೂರ್ತ ನಡೆಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ದೇವಳದ ಮಾಜಿ ಮೊಕ್ತೇಸರ, ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ರವಿಕುಮಾರ್ ಕಡೆಕಾರ್, ಸುಮನಸಾ ಗೌರವಾಧ್ಯಕ್ಷ ಎಮ್.ಎಸ್. ಭಟ್, ಅಧ್ಯಕ್ಷ, ಕೊಡವೂರು ದೇವಳ ಮಾಜಿ ಆಡಳಿತ ಮೊಕ್ತೇಸರ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಪತ್ರಕರ್ತ ಹಾಗೂ ನಾಟಕ ರಚನೆಕಾರ ನಾಗರಾಜ್ ವರ್ಕಾಡಿ, ಸುಮನಸಾ ಪದಾಧಿಕಾರಿಗಳು, ಸದಸ್ಯರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!