Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ `ದಂಡಿಗೆ ಹನುಮ' ಪುಸ್ತಕ ಅನಾವರಣ

`ದಂಡಿಗೆ ಹನುಮ’ ಪುಸ್ತಕ ಅನಾವರಣ

ದಂಡಿಗೆ ಹನುಮ ಪುಸ್ತಕ ಅನಾವರಣ
(ಸುದ್ದಿಕಿರಣ ವರದಿ)

ಉಡುಪಿ: ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್ ಎಸ್. ನಾಯ್ಕ ಅವರ ನಾಲ್ಕನೇ ಕೃತಿ ದಂಡಿಗೆ ಹನುಮ ಪುಸ್ತಕವನ್ನು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.

ಹೊನ್ನಾವರ ತಾಲ್ಲೂಕಿನ ಚಂದಾವರದಲ್ಲಿರುವ ಶ್ರೀ ಹನುಮಂತ ಕ್ಷೇತ್ರದ ಕುರಿತು ಬರೆದಿರುವ ಈ ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಪಾದರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾರದಾ ದೇವಿದಾಸ್, ಎಂಜಿಎಂ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲ ಡಾ| ಎಂ. ಜಿ. ವಿಜಯ, ಜ್ಯೋತಿ ವಿಜಯ ಹಾಗೂ ಉಪನ್ಯಾಸಕ ರಾಜಮೂರ್ತಿ ಇದ್ದರು.

ಈ ಕೃತಿಗೆ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಿರುವುದನ್ನು ಸ್ಮರಿಸಬಹುದು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!