ಮಂಗಳೂರು: ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಸಂಗೀತ ಪೂರಕ ಎಂದು ಮಂಗಳೂರು ಆಫೀಸರ್ಸ್ ಕ್ಲಬ್ ಜಂಟಿ ಕಾರ್ಯದರ್ಶಿ ಬಿ. ಜಗದೀಶ ಪೈ ಹೇಳಿದರು.
ನಮ್ಮ ಕುಡ್ಲ ಸ್ಪ್ಯೂಲ್ ಗಾಯನ ಬಳಗ ಆಶ್ರಯದಲ್ಲಿ ಶನಿವಾರ ನಗರದ ಆಫೀಸರ್ಸ್ ಕ್ಲಬ್ ನಲ್ಲಿ ನಡೆದ ಗಾಯಕರ ಸಮ್ಮಿಲನ ಉದ್ಘಾಟಿಸಿ ಮಾತನಾಡಿದರು.
ಸಂಗೀತವನ್ನು ಪರರನ್ನು ಮೆಚ್ಚಿಸಲು ಹಾಡುವುದಕ್ಕಿಂತ ಸ್ವಸಂತೋಷಕ್ಕಾಗಿ ಹಾಡಬೇಕು. ಅದರಿಂದ ಮಾನಸಿಕ ನೆಮ್ಮದಿ ಸಿಗುವುದರ ಜೊತೆಗೆ ನಮ್ಮಲ್ಲಿರುವ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದರು.
ನಮ್ಮ ಕುಡ್ಲ ಗಾಯನ ಬಳಗ ಸಂಯೋಜಕಿ ಶಶಿಪ್ರಭಾ ಅಧ್ಯಕ್ಷತೆ ವಹಿಸಿ, ಬೆಳಕಿಗೆ ಬಾರದ ಅದೆಷ್ಟೋ ಪ್ರತಿಭೆಗಳಿವೆ. ಅವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊತ್ತಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಗಾಯಕಿ ಮಮತ ಶೆಟ್ಟಿ ಶುಭ ಹಾರೈಸಿದರು.
ಗಾಯಕಯರಾದ ಡಾ. ಬಸವಪ್ರಭು ಪಾಟೀಲ್, ಆಶಾ ಪೈ, ಲತಾ ಶಾಂತಕುಮಾರ್ ವೇದಿಕೆಯಲ್ಲಿದ್ದರು.
ಸಂಘಟಕ, ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಶಾಂತಕುಮಾರ್ ಎಚ್. ಎಂ. ಸ್ವಾಗತಿಸಿ, ನಿರೂಪಿಸಿದರು.
ಮಂಗಳೂರು, ಉಡುಪಿ ಮಾತ್ರವಲ್ಲದೆ ಹುಬ್ಬಳ್ಳಿ, ಗದಗ, ಬೆಂಗಳೂರು ಮೊದಲಾದೆಡೆಗಳಿಂದ ಆಗಮಿಸಿದ ಗಾಯಕರು ಪ್ರೇಕ್ಷಕರನ್ನು ರಂಜಿಸಿದರು.