ಸುದ್ದಿಕಿರಣ ವರದಿ
ಸೋಮವಾರ, ಜನವರಿ 17
ಪರ್ಯಾಯೋತ್ಸವ: ಮರಳು ಶಿಲ್ಪ ರಚನೆ
ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ 501ನೇ ಆವರ್ತನೆಯ ಪರ್ಯಾಯ ಮಹೋತ್ಸವ ಹಿನ್ನೆಲೆಯಲ್ಲಿ ಭಾವಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಸಂದರ್ಭದಲ್ಲಿ ಸ್ಯಾಂಡ್ ಥೀಮ್ ಕಲಾವಿದರು ಮಲ್ಪೆ ಕಡಲ ತೀರದಲ್ಲಿ ಸೋಮವಾರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಮರಳು ಚಿತ್ರ ರಚಿಸಿದರು.
ಕಲಾವಿದರಾದ ಹರೀಶ್ ಸಾಗ, ಜೈ ನೇರಳಕಟ್ಟೆ ಮತ್ತು ಸಂತೋಷ ಭಟ್ ಸಹಕರಿಸಿದರು.