Friday, January 28, 2022
Home ಮನರಂಜನೆ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿಸುವುದು ಕಲಾವಿದನಿಂದ ಸಾಧ್ಯ

ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿಸುವುದು ಕಲಾವಿದನಿಂದ ಸಾಧ್ಯ

ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿಸುವುದು ಕಲಾವಿದನಿಂದ ಸಾಧ್ಯ

ಮಣಿಪಾಲ, ನ. 29 (ಸುದ್ದಿಕಿರಣ ವರದಿ): ಮನುಷ್ಯನನ್ನು ಯಾವುದೇ ದುರಭ್ಯಾಸಗಳಿಗೆ ಬಲಿಯಾಗದೆ ಸುಸಂಸ್ಕೃತನ್ನಾಗಿಸಲು ಮತ್ತು ಪರಿಣಾಮಕಾರಿಯಾಗಿ ಮನೋಚೈತನ್ಯವನ್ನು ಬೆಳೆಸಲು ಕಲಾವಿದನಿಂದ ಸಾಧ್ಯ. ಅದಕ್ಕೆ ಪೂರಕವಾಗಿ ಕಲೆಯಲ್ಲಿ ತೊಡಗಿ ಪ್ರದರ್ಶನದಂಥ ವೇದಿಕೆ ಲಭಿಸಿದಾಗ ಇನ್ನೂ ಉತ್ತಮವಾಗಿ ಕಲಾಕೃತಿ ರಚಿಸಲು ಪ್ರೇರೇಪಣೆ ಲಭಿಸುತ್ತದೆ ಎಂದು ಕಲಾಕ್ಷೇತ್ರ ಕುಂದಾಪುರ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಹೇಳಿದರು.

ಇಲ್ಲಿನ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಕ್ಲಾಸಿಕ್ ಆರ್ಟ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಅಭ್ಯಾಗತರಾಗಿ ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರಮೇಶ್ ಸೇರ್ವೆಗಾರ್, ಮಣಿಪಾಲ ಎಂ.ಸಿ.ಎಚ್.ಪಿ.ಯ ಫಿಸಿಯೋಥೆರಫಿ ತಜ್ಞ ರಾಜೇಶ್ ನಾವಡ ಜಿ. ವಿ. ಮತ್ತು ಕರಾವಳಿ ಯೂತ್ ಕ್ಲಬ್ ಅಶೋಕ್ ಆಚಾರ್ಯ ಆಗಮಿಸಿದ್ದರು.

ಮಾರ್ಗದರ್ಶಕ, ಕಲಾವಿದ ಹರೀಶ್ ಸಾಗಾ ಪ್ರಸ್ತಾವನೆಗೈದರು. ಕಲಾ ವಿದ್ಯಾರ್ಥಿನಿಯರಾದ ಚೇತನಾ ಗಣೇಶ್ ನಿರೂಪಿಸಿದರು. ಪ್ರಜ್ಞಾ ಭಟ್ ಪ್ರಾರ್ಥಿಸಿದರು. ಅಭಿನಯ ನಾಯಕ್ ಸ್ವಾಗತಿಸಿ, ಡಾ. ಸುಮೀತ್ ದಿಲ್ ಸಿಂಗ್ ವಂದಿಸಿದರು.

ಪ್ರದರ್ಶನದ ವಿಶೇಷತೆ
ಕೇಂದ್ರದ 19ರಿಂದ 75ರ ವಯೋಮಾನದ ಹಿರಿಯರ ವಿಭಾಗದ 25 ಮಂದಿ ಮತ್ತು 5ರಿಂದ 18 ವರ್ಷದ ವರೆಗಿನ ಕಿರಿಯರ ವಿಭಾಗದ 25 ಮಂದಿ ಕಲಾ ವಿದ್ಯಾರ್ಥಿಗಳು ಭಾಗಿ
ಒಟ್ಟು 50 ಕಲಾ ವಿದ್ಯಾರ್ಥಿಗಳ 50 ಕಲಾಕೃತಿಗಳು ಆಯ್ಕೆ.
ಪ್ರತಿಯೊಬ್ಬರ ತಲಾ ಒಂದರಂತೆ ಅಕ್ರಾಲಿಕ್, ಪ್ಯಾಲೆಟ್ ನೈಫ್, ಜಲವರ್ಣ, ಪೋಸ್ಟರ್ ವರ್ಣ, ಪೆನ್ಸಿಲ್, ಚಾರ್ಕೋಲ್, ಪೇಸ್ಟಲ್ ಶೇಡಿಂಗ್ ಸೇರಿದಂತೆ ಬೇಸಿಕ್ ಕೃತಿಯ ಮೂಲಕ ಪ್ರತಿಭೆಯ ಕೃತಿಗೆ ಸ್ಪಂದನೆ.
ಸ್ವಸಾಮರ್ಥ್ಯದಿಂದ ತರಗತಿಯ ಕಲಾಭ್ಯಾಸದಲ್ಲಿ ವಿಶೇಷ ತರಬೇತಿ ಇಲ್ಲದೆ ರಚಿಸಿರುವ ಚಿತ್ರಕೃತಿಗಳು.
ಕಲಾ ಪ್ರದರ್ಶನದ ಮೂಲಕ ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರಿಗಾಗಿ ಕಲಾಸ್ಪೂರ್ತಿ ಬೆಸೆಯುವ ವೇದಿಕೆ.
ಕಲಾ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಕಲಿಯುವ ಮತ್ತು ಕಲಾಶಿಕ್ಷಣದ ವಿವಿಧ ಮಜಲುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಲಾ ಕೇಂದ್ರದ ಚಿತ್ರಕಲಾ ಪ್ರದರ್ಶನ
ನ. 30ರ ವರೆಗೆ ಬೆಳಿಗ್ಗೆ 10ರಿಂದ ಸಂಜೆ 7.30ರ ವರೆಗೆ ಸಾರ್ವಜನಿಕರಿಗೆ ಮುಕ್ತ ವೀಕ್ಷಣೆಗೆ ಅವಕಾಶ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!