ಕರ್ಕಿ ಕಾವ್ಯ ಪ್ರಶಸ್ತಿಗೆ ಆಯ್ಕೆ
ಬೆಳಗಾವಿ, ಡಿ. 13 (ಸುದ್ದಿಕಿರಣ ವರದಿ): ಕನ್ನಡದ ಪ್ರಸಿದ್ಧ ಕವಿ ಡಾ| ಡಿ. ಎಸ್. ಕರ್ಕಿ ಹೆಸರಿನಲ್ಲಿ ಇಲ್ಲಿನ ಡಾ| ಡಿ. ಎಸ್. ಕರ್ಕಿ ಪ್ರತಿಷ್ಠಾನ ನೀಡುವ 2021ನೇ ಸಾಲಿನ ಕಾವ್ಯ ಪ್ರಶಸ್ತಿಗೆ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಅವನು ಹೆಣ್ಣಾಗಬೇಕು ಕೃತಿ ಆಯ್ಕೆಯಾಗಿದೆ.
ಡಿ. 18ರಂದು ಇಲ್ಲಿ ನಡೆಯುವ ಡಾ| ಕರ್ಕಿ ಅವರ 114ನೇ ಜನ್ಮದಿನದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಅವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ