ಸರ್ವಮೂಲ ಆ್ಯಪ್ ಬಿಡುಗಡೆ
(ಸುದ್ದಿಕಿರಣ ವರದಿ)
ಉಡುಪಿ: ದ್ವೈತ ಮತ ಸಂಸ್ಥಾಪನಾಚಾರ್ಯ ಲೋಕಗುರು ಆಚಾರ್ಯ ಮಧ್ವರ ಕೃತಿಗಳ ಸಂಗ್ರಹ ಸರ್ವಮೂಲದ ಡಿಜಿಟಲೀಕರಣ ರೂಪಾಂತರ ಸರ್ವಮೂಲ ಆ್ಯಪ್ ನ್ನು ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಶ್ರೀ ಮಧ್ವಾಚಾರ್ಯರು ವೇದ ಉಪನಿಷತ್ತು ಭಗವದ್ಗೀತೆ ಮಹಾಭಾರತ ಮೊದಲಾದವುಗಳಿಗೆ ವ್ಯಾಖ್ಯಾನ ಹಾಗೂ ಅನೇಕ ಸ್ವಂತ ಕೃತಿಗಳನ್ನೂ ರಚಿಸಿದ್ದು, ಅವುಗಳ ಮೂಲ ಪ್ರತಿಗಳು ತುಳು ಲಿಪಿಯಲ್ಲಿದ್ದು, ಇಂದಿಗೂ ಪಲಿಮಾರು ಮಠದಲ್ಲಿ ಸಂರಕ್ಷಿಸಲ್ಪಟ್ಟಿವೆ.
ಪ್ರಕೃತ ಅಂಡ್ರಾಯಿಡ್ ಆ್ಯಪ್ ನಲ್ಲಿ ತುಳುಲಿಪಿಯನ್ನೂ ಒಳಗೊಂಡು ಸಂಸ್ಕೃತ, ಕನ್ನಡ ಮೊದಲಾದ ಏಳು ಲಿಪಿಗಳಲ್ಲಿ ಓದಲು ಅನುಕೂಲ ಕಲ್ಪಿಸಲಾಗಿದೆ.
ಆಸಕ್ತರು ಗೂಗಲ್ ಪ್ಲೇಸ್ಟೋರಿನಿಂದ ಉಚಿತವಾಗಿ ಪಡೆದುಕೊಳ್ಳಬಹುದು.
ಶ್ರೀಕೃಷ್ಣಮಠದ ಅಧೀನ ಸಂಸ್ಥೆಯಾದ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರ ಅದನ್ನು ಅಭಿವೃದ್ಧಿಪಡಿಸಿದೆ.