Friday, January 28, 2022
Home ಮನರಂಜನೆ ಯಕ್ಷಗಾನ ಕಲಾರಂಗ ಅರ್ಥದಾರಿ ಪ್ರಶಸ್ತಿಗೆ ಆಯ್ಕೆ

ಯಕ್ಷಗಾನ ಕಲಾರಂಗ ಅರ್ಥದಾರಿ ಪ್ರಶಸ್ತಿಗೆ ಆಯ್ಕೆ

ಯಕ್ಷಗಾನ ಕಲಾರಂಗ ಅರ್ಥದಾರಿ ಪ್ರಶಸ್ತಿಗೆ ಆಯ್ಕೆ

(ಸುದ್ದಿಕಿರಣ ವರದಿ)
ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗ ಪೆರ್ಲ ಕೃಷ್ಣ ಭಟ್ ಮತ್ತು ಮಟ್ಟಿ ಮುರಲೀಧರ ರಾವ್ ನೆನಪಿನಲ್ಲಿ ತಾಳಮದ್ದಲೆ ಅರ್ಥದಾರಿಗಳಿಗೆ ನೀಡುವ ಯಕ್ಷಗಾನ ಕಲಾರಂಗ ಅರ್ಥದಾರಿ ಪ್ರಶಸ್ತಿಗೆ ಅನುಕ್ರಮವಾಗಿ ವಿದ್ವಾನ್ ಉಮಕಾಂತ ಭಟ್ ಮತ್ತು ಸುರತ್ಕಲ್ ವಾಸುದೇವ ರಾವ್ ಆಯ್ಕೆಯಾಗಿದ್ದಾರೆ.

ಉಮಾಕಾಂತ ಭಟ್ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾಗಿದ್ದು, ಪ್ರಸಿದ್ಧ ಅರ್ಥದಾರಿಯಾಗಿ ಮಾನಿತರು. ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ, ಆಗಾಧ ಪುರಾಣ ಜ್ಞಾನ ಹೊಂದಿದ್ದಾರೆ. ಪ್ರವಚನಕಾರರಾಗಿಯೂ ಅವರು ಪರಿಚಿತರು.

ನಿವೃತ್ತ ಅಧ್ಯಾಪಕ ಸುರತ್ಕಲ್ ವಾಸುದೇವ ರಾವ್ ಅರ್ಥದಾರಿಯಾಗಿ, ಯಕ್ಷಗಾನ ನಿರ್ದೇಶಕರಾಗಿ ಸಾಧನೆ ಮಾಡಿದವರು. ಮಹಿಳಾ ತಾಳಮದ್ದಲೆ ಸಂಘಟನೆಯ ಸ್ಥಾಪಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ.

ಪ್ರಶಸ್ತಿಪತ್ರ ಮತ್ತು ತಲಾ 20 ಸಾವಿರ ರೂ. ನಗದು ಒಳಗೊಂಡಿರುವ ಪ್ರಶಸ್ತಿಯನ್ನು ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಈ ತಿಂಗಳ 26ರಂದು ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!