Friday, January 28, 2022
Home ಸಮಾಚಾರ ಜಿಲ್ಲಾ ಸುದ್ದಿ ಕಲೆಯ ಮೂಲಕ ಪರಮಾತ್ಮನ ಅನುಸಂಧಾನ

ಕಲೆಯ ಮೂಲಕ ಪರಮಾತ್ಮನ ಅನುಸಂಧಾನ

ಕಲೆಯ ಮೂಲಕ ಪರಮಾತ್ಮನ ಅನುಸಂಧಾನ

ಉಡುಪಿ, ನ. 1 (ಸುದ್ದಿಕಿರಣ ವರದಿ): ಮನಃಪೂರ್ವಕವಾಗಿ ಕಲೆಯಲ್ಲಿ ತೊಡಗಿಕೊಳ್ಳುವ ಮೂಲಕ ಕಲಾವಿದ ಪರಮಾತ್ಮನೊಂದಿಗೆ ಅನುಸಂಧಾನ ಸಾಧಿಸುತ್ತಾನೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪರ್ಯಾಯ ಅದಮಾರು ಶ್ರೀಕೃಷ್ಣ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಸಂಯುಕ್ತಾಶ್ರಯದಲ್ಲಿ ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ಕಿರಿಮಂಜೇಶ್ವರ ಪ್ರಸ್ತುತಪಡಿಸಿದ ಆರನೇ ವರ್ಷದ ಯಕ್ಷ ಅಷ್ಟಾಹ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಧಾರೇಶ್ವರರಂಥ ನಿಸ್ವಾರ್ಥಿ ಕಲಾವಿದರಿಂದ ಕಲೆ ಉಳಿದು ಬೆಳೆಯುತ್ತಿದೆ ಎಂದರು.

ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಜನಾರ್ದನ ಹಂದೆ ಮತ್ತು ಬಾಲಗಂಗಾಧರ ರಾವ್ ಶುಭಾಶಂಸನೆಗೈದರು. ಉದ್ಯಮಿ ಗೋಪಾಲ ಬಂಗೇರ ಇದ್ದರು.

ಸಂಘಟಕ, ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ಪೌರಾಣಿಕ ಕಥೆಯ ಹೊಸ ಪ್ರಸಂಗಗಳನ್ನು ಪರಿಚಯಿಸುವುದು ಕಾರ್ಯಕ್ರಮದ ಆಶಯ ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!