Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷರಾಗಿ ಅಜಿತ್ ಕುಮಾರ್ ಆಯ್ಕೆ

ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷರಾಗಿ ಅಜಿತ್ ಕುಮಾರ್ ಆಯ್ಕೆ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 26

ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷರಾಗಿ ಅಜಿತ್ ಕುಮಾರ್ ಆಯ್ಕೆ
ಉಡುಪಿ: ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಪುನರಾಯ್ಕೆಯಾಗಿದ್ದಾರೆ.

ಈಚೆಗೆ ನಡೆದ ಮಂಡಳಿಯ 64ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

2022- 23ನೇ ಸಾಲಿನ ಇತರ ಪದಾಧಿಕಾರಿಗಳ ವಿವರ ಇಂತಿದೆ.

ಉಪಾಧ್ಯಕ್ಷ- ಕೆ. ಜೆ. ಗಣೇಶ್, ಕಾರ್ಯದರ್ಶಿ- ಸುನಿಲ್ ಕುಮಾರ್,  ಜೊತೆ ಕಾರ್ಯದರ್ಶಿ- ಜಯ ಕೆ., ಕೋಶಾಧಿಕಾರಿ- ಎ. ನಟರಾಜ ಉಪಾಧ್ಯ.

ಸದಸ್ಯರು- ಮುರಲಿ ಕಡೆಕಾರ್, ಪ್ರವೀಣ್ ಉಪಾಧ್ಯ, ಕೆ. ಜೆ. ಕೃಷ್ಣ, ಪ್ರಕಾಶ್ ಹೆಬ್ಬಾರ್, ಡಾ| ಗಣಪತಿ ಭಟ್, ಮಂಜುನಾಥ ತೆಂಕಿಲ್ಲಾಯ, ಮಾಧವ ಕೆ., ರಮೇಶ ಸಾಲಿಯಾನ್, ಕೆ. ಜೆ. ಸುಧೀಂದ್ರ, ವಸಂತ ಪಾಲನ್ ಮತ್ತು ನಚಿಕೇತ.

ಸಲಹಾ ಸಮಿತಿ ಸದಸ್ಯರು- ಎಸ್. ವಿ. ಭಟ್, ನಾರಾಯಣ ಎಂ. ಹೆಗಡೆ, ಶ್ರೀರಮಣ ಆಚಾರ್ಯ, ವಿಜಯ್ ಕುಮಾರ್, ವಿಠಲ ಗಾಣಿಗ, ವಿದ್ಯಾ ಪ್ರಸಾದ್, ಅರವಿಂದ ಆಚಾರ್ಯ, ಪ್ರಶಾಂತ್ ಕೆ. ಎಸ್., ರಾಘವೇಂದ್ರ ಸೋಮಯಾಜಿ, ಜಗದೀಶ ಆಚಾರ್ಯ ಮತ್ತು ಎ. ಸತ್ಯಜಿತ್ ಉಪಾಧ್ಯ.

ಗೌರವ ಸಲಹೆಗಾರ- ಎ. ರಾಘವೇಂದ್ರ ಉಪಾಧ್ಯ.

ಜಯ ಕೆ. ಗತ ಸಭೆಯ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗಣೇಶ್ ಹೆಬ್ಬಾರ್ ಅವರನ್ನು ಲೆಕ್ಕಪರಿಶೋಧಕರನ್ನಾಗಿ ನಿಯುಕ್ತಿಗೊಳಿಸಲಾಯಿತು. ಕಾರ್ಯದರ್ಶಿ ಸುನಿಲ್ ಕುಮಾರ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!