Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಕಲೆಯ ಜೀವಂತಿಕೆಗೆ ಹಿರಿಯರ ಕೊಡುಗೆ ಅಪಾರ

ಕಲೆಯ ಜೀವಂತಿಕೆಗೆ ಹಿರಿಯರ ಕೊಡುಗೆ ಅಪಾರ

ಕಲೆಯ ಜೀವಂತಿಕೆಗೆ ಹಿರಿಯರ ಕೊಡುಗೆ ಅಪಾರ

ಉಡುಪಿ, ನ. 14 (ಸುದ್ದಿಕಿರಣ ವರದಿ): ಭಾರತೀಯ ಕಲೆ, ಸಂಸ್ಕೃತಿಯ ಮೇಲೆ ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕ ದಾಳಿ ನಡೆಯುತ್ತಿದ್ದರೂ ನಮ್ಮ ಸಂಸ್ಕೃತಿ ಜೀವಂತವಾಗಿರಲು ಅನೇಕ ಮಂದಿಯ ತ್ಯಾಗವೇ ಕಾರಣ. ಕಲೆಗಾಗಿ ಹಿರಿಯರು ತಮ್ಮ ಜೀವನ ಮುಡಿಪಾಗಿಟ್ಟಿದ್ದು, ಈ ನಿಟ್ಟಿನಲ್ಲಿ ಕೋಳ್ಯೂರು ರಾಮಚಂದ್ರ ರಾವ್ ಕೊಡುಗೆ ಶ್ಲಾಘನೀಯ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.

ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ವತಿಯಿಂದ ಡಾ| ಕೋಳ್ಯೂರು ರಾಮಚಂದ್ರ ರಾಯರ 90ರ ಹುಟ್ಟುಹಬ್ಬದ ಗೌರವಾರ್ಥ ರಾಜಾಂಗಣದಲ್ಲಿ ನಡೆದ ಕಲಾಭಿಯಾನ ಕೋಳ್ಯೂರು ವೈಭವ ಕಾರ್ಯಕ್ರಮದಲ್ಲಿ ಡಾ| ಕೋಳ್ಯೂರು ಸನ್ಮಾನಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಸ್ತ್ರೀ ಪಾತ್ರದಲ್ಲಿ 7 ದಶಕಗಳ ಸುದೀರ್ಘ ಕೊಡುಗೆ ಗಮನೀಯ ಎಂದರು.

ನೈಸರ್ಗಿಕವಾಗಿ ಕರಗತ
ಸಾಂಸ್ಕೃತಿಕ ಚಿಂತಕ, ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಕೋಳ್ಯೂರು ರಾಮಚಂದ್ರ ರಾಯರ ಪಾತ್ರಗಳು ಯಕ್ಷಗಾನದಲ್ಲಿ ಚಿರಂಜೀವಿ. ಸ್ತ್ರೀ ವೇಷದಲ್ಲಿ ಅವರನ್ನು ಮೀರಿಸುವ ಕಲಾವಿದರಿಲ್ಲ. ಸ್ತ್ರೀ ಪಾತ್ರ ಅವರಿಗೆ ನೈಸರ್ಗಿಕವಾಗಿಯೇ ಕರಗತವಾಗಿದೆ ಎಂದು ಗುಣಗಾನ ಮಾಡಿದರು.

ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಮತ್ತು ಹಿರಿಯ ಸಾಹಿತಿ ಎ. ಪಿ. ಮಾಲತಿ ಅಭಿನಂದನ ಭಾಷಣ ಮಾಡಿದರು.

ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

ಕಥಕ್ಕಳಿ ಪ್ರದರ್ಶನ
ಕಾರ್ಯಕ್ರಮದ ತರುವಾಯ ಕೃಷ್ಣ ಕುಚೇಲ ವೃತ್ತಮ್ ಆಖ್ಯಾನದ ಕಥಕ್ಕಳಿ ಕಲಾಪ್ರದರ್ಶನ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!