Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ತಿಂಗಳ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ

ತಿಂಗಳ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ

ಸುದ್ದಿಕಿರಣ ವರದಿ
ಭಾನುವಾರ, ಫೆಬ್ರವರಿ 20

ತಿಂಗಳ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ
ಉಡುಪಿ: ಪರ್ಯಾಯ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ಸಂಯೋಜನೆಯೊಂದಿಗೆ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ ನಡೆಯುವ ತಿಂಗಳ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವನ್ನು ಭಾನುವಾರ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿದರು.

ತಾಳಮದ್ದಳೆ ಯಕ್ಷಗಾನ ಪ್ರಕಾರ, ಮಾತಿನ ಮೂಲಕ ಭಗವಂತನ ಮಹಿಮೆಗಳ ವರ್ಣನೆಯನ್ನು ಸಾಮಾನ್ಯ ಜನರಿಗೆ ಮನೋರಂಜನೆ ಮೂಲಕ ತತ್ವಜ್ಞಾನ ನೀಡುವ ಮಾಧ್ಯಮ ಎಂದರು.

ಪರ್ಯಾಯ ಕೃಷ್ಣಾಪುರ ಮಠದ ದಿವಾನ ವರದರಾಜ ಭಟ್, ಯಕ್ಷಗಾನ ಕಲಾರಂಗ ಅಧ್ಯಕ್ಷ ಗಂಗಾಧರ ರಾವ್, ಉಪಾಧ್ಯಕ್ಷ ಎಸ್. ವಿ. ಭಟ್, ಕಾರ್ಯದರ್ಶಿ ಮುರಳಿ ಕಡೆಕಾರ್, ಪದಾಧಿಕಾರಿಗಳಾದ ನಾರಾಯಣ ಹೆಗಡೆ, ಹಿರಿಯ ಅರ್ಥಧಾರಿ ಪ್ರೊ. ಎಂ. ಎಲ್. ಸಾಮಗ ಇದ್ದರು.

ಬಳಿಕ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಿತು.

ಕಲಾವಿದರಾಗಿ ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಪದ್ಮನಾಭ ಉಪಾಧ್ಯಾಯ ಮತ್ತು ಸುಕುಮಾರ ಬಲ್ಲಾಳ, ಅರ್ಥಧಾರಿಗಳಾಗಿ ಮೇಲುಕೋಟೆ ವಿದ್ವಾನ್ ಉಮಾಕಾಂತ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ವಿದ್ವಾನ್ ಹರಿನಾರಾಯಣದಾಸ ಆಸ್ರಣ್ಣ ಕಟೀಲು, ಹರೀಶ ಬೊಳಂತಿಮೊಗರು, ಪ್ರಸಾದ್ ಭಟ್ಕಳ ಮೊದಲಾದವರು ಭಾಗವಹಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!