Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಕಲಾಪೋಷಕರಿಂದ ಯಕ್ಷಗಾನದ ಉಳಿವು

ಕಲಾಪೋಷಕರಿಂದ ಯಕ್ಷಗಾನದ ಉಳಿವು

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಕಲಾಪೋಷಕರಿಂದ ಯಕ್ಷಗಾನದ ಉಳಿವು
ಉಡುಪಿ: ರಾಮಾಯಣ, ಮಹಾಭಾರತದಂಥ ಪುರಾಣಗಳು ಇಂದು ಜನಮಾನಸದಲ್ಲಿ ಉಳಿಯುವಲ್ಲಿ ಯಕ್ಷಗಾನ ಕಲೆಯ ದೊಡ್ಡ ಕೊಡುಗೆ ಇದೆ. ಇಂಥ ಅಸಾಮಾನ್ಯ ಕಲೆಯ ಉಳಿವಿಗೆ ಕಲಾಪೋಷಕರ ನೆರವು ಅತೀ ಅಗತ್ಯ ಎಂದು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಹೇಳಿದರು.

ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಾಪುರ ಶ್ರೀಕೃಷ್ಣ ಮಠ, ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಅತಿ ಮುಖ್ಯ
ಅಡುಗೆ ಸೊಗಸಾಗಲು ಉಪ್ಪು, ಖಾರ, ಹುಳಿ ಮೊದಲಾದ ಪದಾರ್ಥಗಳು ಹೇಗೆ ಮುಖ್ಯವೋ ಅಂತೆಯೇ ಯಕ್ಷಗಾನಕ್ಕೂ ಹೆಜ್ಜೆ ಗೆಜ್ಜೆ, ತಾಳ, ಭಾಗವತಿಕೆ ಕೂಡಾ ಅತೀ ಮುಖ್ಯ ಎಂದ ಅವರು, ಕರಾವಳಿಯ ಗಂಡುಕಲೆ ಎನಿಸಿದ ಯಕ್ಷಗಾನದ ಉಳಿವಿಗೆ ಕಲಾಪೋಷಕರು ನೀಡುತ್ತಿರುವ ನೆರವು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಬಡಗುತಿಟ್ಟಿನ ಖ್ಯಾತ ಭಾಗವತ ಆನಂದ ಅಂಕೋಲ ಅವರನ್ನು ಸನ್ಮಾನಿಸಲಾಯಿತು.

ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಸಹನಶೀಲ ಪೈ, ಗಾಯಕ ಸುರೇಶ್ ಪೈ, ಭಾಗವತ ಆನಂದ ಅಂಕೋಲ ಮೊದಲಾದವರಿದ್ದರು.

ಯಕ್ಷಗಾನ ಮೇಳ ಶಿರಸಿ ವ್ಯವಸ್ಥಾಪಕ ಕೇಶವ ಹೆಗಡೆ ಮಂಗಳೂರು ಸ್ವಾಗತಿಸಿ, ವಂದಿಸಿದರು.

ಬಳಿಕ ಯಕ್ಷಗಾನ ಮೇಳ ಶಿರಸಿ ವತಿಯಿಂದ ಮಾಳವಿಕಾ ಪರಿಣಯ ಯಕ್ಷಗಾನ ಪ್ರದರ್ಶನಗೊಂಡಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!