Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಯಕ್ಷ ಶಿಕ್ಷಣ ಗುರುಗಳ ಸಮಾಲೋಚನಾ ಸಭೆ

ಯಕ್ಷ ಶಿಕ್ಷಣ ಗುರುಗಳ ಸಮಾಲೋಚನಾ ಸಭೆ

ಸುದ್ದಿಕಿರಣ ವರದಿ
ಗುರುವಾರ, ಜೂನ್ 16

ಯಕ್ಷ ಶಿಕ್ಷಣ ಗುರುಗಳ ಸಮಾಲೋಚನಾ ಸಭೆ
ಉಡುಪಿ: ಉಡುಪಿ ವಿಧಾನ ಸಭಾ ವ್ಯಾಪ್ತಿಯ ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವ ಯಕ್ಷ ಶಿಕ್ಷಣ ಟ್ರಸ್ಟ್ ಗುರುಗಳ ಸಮಾಲೋಚನಾ ಸಭೆ ಬುಧವಾರ ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ನಡೆಯಿತು. 20 ಮಂದಿ ಯಕ್ಷಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ವರ್ಷ ಸುಮಾರು 50 ಪ್ರೌಢಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ ನಡೆಸಲು ಉದ್ದೇಶಿಸಲಾಗಿದ್ದು, ಅದನ್ನು ಯಶಸ್ವಿಗೊಳಿಸಲು ಎಲ್ಲ ಗುರುಗಳು ಸಹಕರಿಸುವಂತೆ ಕಾರ್ಯದರ್ಶಿ ಮುರಳಿ ಕಡೆಕಾರ್ ವಿನಂತಿಸಿದರು.

ಗುರುಗಳಿಗೆ ಈ ತಿಂಗಳ 25ರೊಳಗೆ ಶಾಲೆಗಳನ್ನು ಹಂಚಿಕೆ ಮಾಡಿ, ತರಗತಿ ಆರಂಭಿಸಲು ಸೂಚಿಸಲಾಯಿತು.

ಯಕ್ಷಶಿಕ್ಷಣ ಟ್ರಸ್ಟ್ ವಿಶ್ವಸ್ಥ ಎಸ್. ವಿ. ಭಟ್ ಸ್ವಾಗತಿಸಿದರು.

ವಿಶ್ವಸ್ಥ ಮಂಡಳಿ ಸದಸ್ಯರಾದ ಪ್ರೊ. ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಹಾಗೂ ಮಂಜುನಾಥ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!