ಇಂಡಿ
ಇಂಡಿ:ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ತಡವಲಗಾ ರಸ್ತೆಯಲ್ಲಿ ನಡೆದಿದೆ. ಅಣ್ಣಪ್ಪಾ ಇಂಡಿ, ಬಾಬುರಾವ್ ಕೇದಾರ ಬಂಧಿತ ಆರೋಪಿಗಳು. ಗುರುರಾಜ ಬಿರಾದಾರ ಪರಾರಿಯಾಗಿದ್ದಾನೆ. ಆರೋಪಿಗಳು ಪಿಕ್ ಅಪ್ ವಾಹನದಲ್ಲಿ 640 ಕೆಜಿ ಅಕ್ಕಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕರು ಹಾಗೂ ಪೊಲೀಸರು ದಾಳಿಗೈದು ಅಕ್ಕಿ, ವಾಹನ ಜಪ್ತಿಗೈದಿದ್ದಾರೆ. ಈ ಸಂದರ್ಭದಲ್ಲಿ ಇಂಡಿ ಆಹಾರ ನಿರೀಕ್ಷಕರಾದ ಪರಮಾನಂದ ಹೂಗಾರ ಹಾಗೂ ಇಂಡಿ ಗ್ರಾಮೀಣ ಸಿಪಿಐ ಎಂ ಎಂ ಡಪಿನ ಇದ್ದರು. ಈ ಕುರಿತು ಹೊರ್ತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು
ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456
0 Comments