ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪೂರ್ವಭಾವಿ ಸಭೆ 

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪೂರ್ವಭಾವಿ ಸಭೆ 

Posted  36 Views updated 14 days ago

ಕೆಜಿಎಫ್

ಕೆಜಿಎಫ್: ಕೆಜಿಎಫ್ ಕರವೇ ತಾಲೂಕು ಅಧ್ಯಕ್ಷರು ನಂಜುಂಡಪ್ಪ ಹಾಗೂ ಕರವೇ ತಾಲೂಕು ಗೌರವಾಧ್ಯಕ್ಷರು ವಿ.ಎಸ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ನಗರದ ಕಿಂಗ್ ಜಾರ್ಜ್ ಪಾರ್ಕ್ನ ಕರುಮಾರಿಯಮ್ಮ ದೇವಾಲಯದ ಆವರಣದಲ್ಲಿ  ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿ ಎಸ್ ಪ್ರಕಾಶ್ ಕರ್ನಾಟಕ ರಕ್ಷಣಾ ವೇದಿಕೆ ಸತತವಾಗಿ 25 ವರ್ಷಗಳಿಂದ ಭಾಷೆ ಜಲ ಗಡಿ ರಕ್ಷಣೆ ಮಾಡುತ್ತಾ ಬಂದಿದೆ. ಅದೇ ರೀತಿ ಕೆಜಿಎಫ್ ತಾಲ್ಲೂಕು ಘಟಕದಿಂದ ಸತತ ವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿರುತ್ತದೆ. ಈ ಸಭೆಯ ಮುಖ್ಯ ಉದ್ದೇಶ ಜಿಲ್ಲಾ ಮಟ್ಟದಲ್ಲಿ ಕರವೇ ವತಿಯಿಂದ 25ನೇ ವರ್ಷದ ಬೆಳ್ಳಿ  ಹಬ್ಬವನ್ನು ಹಾಗೂ ಕರ್ನಾಟಕ ರಾಜ್ಯ ಉದಯಗೊಂಡು 50 ವರ್ಷಗಳ ಆದ ಕಾರಣದಿಂದ ಸುವರ್ಣ ಕರ್ನಾಟಕ ಇದರ ಪ್ರಯುಕ್ತ ಕೋಲಾರದಲ್ಲಿ ಡಿಸೆಂಬರ್ 29ರಂದು ದೊಡ್ಡಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ತಾಲೂಕು ಮಟ್ಟದಿಂದ ಕರವೇ ಘಟಕದಿಂದ ಇಬ್ಬರು ಕಾರ್ಯಕರ್ತರನ್ನು ಆಯ್ಕೆ ಮಾಡಿ ಬಹುಮಾನ ವಿತರಣೆ. ಹಾಗೂ ಎಸ್ ಎಸ್ ಎಲ್ ಸಿ  ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕನ್ನಡದಲ್ಲಿ ನಿರೂಪಣೆ ಮಾಡಿದರೆ ಮೊದಲನೇ ಮತ್ತು ಎರಡನೇ ಬಹುಮಾನವನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ತಾಲೂಕು ಮಟ್ಟದಿಂದ ಎಲ್ಲಾ  ಕರವೇ ಕಾರ್ಯಕರ್ತರು ಭಾಗವಹಿಸಬೇಕೆಂದು ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರು ನಂಜುಂಡಪ್ಪ. ಕಾರ್ಮಿಕ ಘಟಕ ಅಧ್ಯಕ್ಷರು ಸೀನಪ್ಪ. ಮಹಿಳಾ ಅಧ್ಯಕ್ಷರು ನಿರ್ಮಲ ಪ್ರಧಾನ ಕಾರ್ಯದರ್ಶಿಗಳು ಮಂಜುನಾಥ್ ಫ್ರೂಟ್ಸ್. ನಗರ ಘಟಕ ಅಧ್ಯಕ್ಷರು ಪ್ರದೀಪ್ ವಿ ವೆಂಕಟರಮಣಪ್ಪ ತಾರಾ ನಾಥ್. ನಾರಾಯಣಸ್ವಾಮಿ, ಹೆಗಡೆ ಮಹಿಳಾ ಪದಾಧಿಕಾರಿಗಳು ಲಕ್ಷ್ಮಿ ಜಯಲಕ್ಷ್ಮಿ, ನೇತ್ರ ಭಾಗವಹಿಸಿದ್ದರು.

Image

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪೂರ್ವಭಾವಿ ಸಭೆ 
  • admin