ಕೊಪ್ಪಳ
ಕೊಪ್ಪಳ ಜಿಲ್ಲೆ ಕುಕುನೂರು ತಾಲೂಕ ಪಟ್ಟಣದ ಕುಕನೂರಿನಿಂದ ಚಿಕ್ಕೆನಕೊಪ್ಪ ದಿಬ್ಬದವರಿಗೆ ಹೋಗುವ ಈ ರಸ್ತೆ ಕಾಮಗಾರಿಯನ್ನು ಹೊಸ ಡಂಬಾರೀಕರಣ ರಸ್ತೆಯನ್ನಾಗಿ ಮಾಡಿದರೆ ಯರೇಹಂಚಿನಾಳ ಕಣಿಗಿನಹಾಳ ನೇರವಾಗಿ ಗದಗ ಪಟ್ಟಣ ಸೇರಿದಂತೆ ಹುಬ್ಬಳ್ಳಿ-ಧಾರವಾಡ- ಹೋಗುವ ಸಾರ್ವಜನಿಕರಿಗೆ ವ್ಯಾಪಾರಸ್ಥರಿಗೆ ಶಾಲೆ ವಿದ್ಯಾರ್ಥಿಗಳಿಗೆ ರೈತರಿಗೆ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ಪ್ರಯಾಣ ಮಾಡಲು ಈ ರಸ್ತೆ ತುಂಬಾ ಅನುಕೂಲ ಆಗುತ್ತದೆ ಎಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಹಾಗೂ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಹೂಗಾರ ಇವರ ನೇತೃತ್ವದಲ್ಲಿ ಖಂಡಿಸಿ ಕುಕುನೂರು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಪಿ. ಸುಬ್ರಹ್ಮಣ್ಯ ಇವರ. ಕಚೇರಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳಿಂದ ಈ ಮನವಿಯನ್ನು ಸಲ್ಲಿಸಲಾಯಿತು. ಹೌದು ಅನೇಕ ಬಾರಿ ಈ ರಸ್ತೆ ಸಲುವಾಗಿ ರೈತ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದರು ಸಹ ಕುಕನೂರು ತಾಲೂಕಿನ ಕೋಳಿಪೇಟೆ ಹೊರಗೆ ಮಸ್ಮಾನದ ಪಕ್ಕದ ಎಡಬಾಗದಲ್ಲಿ ಹಳೆ ಗದಗಿನ ರಸ್ತೆ ಪಶ್ಚಿಮ ದಿಕ್ಕಿನಲ್ಲಿ ಈ ರಸ್ತೆ ಬ್ರಿಟಿಷರ ಕಾಲದಿಂದಲೂ ಇದ್ದು ಈ ರಸ್ತೆ ಕಾಮಗಾರಿಯು ಅಧಿಕಾರಿಗಳ ನಿರ್ಲಕ್ಷದಿಂದ ಯಾರು ಕೈಗೊಂಡಿಲ್ಲ ಅದಕ್ಕಾಗಿ ಈ ರಸ್ತೆಯನ್ನು ಶೀಘ್ರದಲ್ಲಿ ಸರ್ಕಾರ ಮಾಡಿ ಕೊಡಬೇಕೆಂದು ರಾಜ್ಯ ರೈತ ಸಂಘಟನೆಯಿಂದ ಕುಕನೂರು ತಾಲೂಕಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಈ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ರಾಜ್ಯ ಸಂಚಾಲಕರಾದ ಮಯಶ ಹಡಪಾದ. ಮಂಜುನಾಥ್ ಆರೇರ ಇತರರು ಪಾಲ್ಗೊಂಡು ಈ ಮನವಿಯನ್ನು ಸಲ್ಲಿಸಿದರು.

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು
ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456
0 Comments