ಕೆಜಿಎಫ್: ತಾಲೂಕಿನ ಎಂ ಕೊತ್ತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜನ ಮಂಗಲದಡಿ ಎಂ ಕೊತ್ತೂರು ಗ್ರಾಮದ ಗೋವಿಂದರಾಜ ಎಂಬವರು ಪಾರ್ಶ್ವಾವಾಯುವಿನಿಂದ ಬಳಲುತ್ತಿದ್ದು. ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಇದನ್ನು ಮನಗಂಡ ಯುವಶಕ್ತಿ ಕರ್ನಾಟಕ ಸಂಘಟನೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಗಮನಕ್ಕೆ ತಂದಿದ್ದರು. ಇಂದು ಯೋಜನೆಯ ಅಧಿಕಾರಿಗಳು ಉಚಿತವಾಗಿ ವಾಟರ್ ಬೆಡ್ ವಿತರಿಸಲಾಯಿತು. ನಂತರ ಮಾತನಾಡಿದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಹಾದೇವ ಅವರು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಅಸಹಾಯಕರಿಗೆ, ನಿರ್ಗತಿಕರಿಗೆ ಯಾರೇ ಆಗಿದ್ದರು ಅಂತವರಿಗೆ ಅಗತ್ಯವಿರುವ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡುತ್ತೇವೆ ಎಂದರು. ಅವರ ಪರಿಸ್ಥಿತಿಗೆ ಅನುಗುಣವಾಗಿ ವಿತರಣೆ ಮಾಡಲಾಗಿದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದರು. ಈ ವೇಳೆ ಸಂಸ್ಥೆಯ ಯೋಜನಾಧಿಕಾರಿ ಮಹಾದೇವ. ಮೇಲ್ವಿಚಾರಕ ಕೃಷ್ಣ. ಯುವಶಕ್ತಿ ಬಾಬು. ವಿಶ್ವ ಮಿಲಿಟರಿ ಮುನಿರತ್ನಂ. ಚಿಟ್ಟಮ್ಮ ಇದ್ದರು

0 Comments