ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕ್ರೀಡೋಪಕರಣ ವಿತರಣೆ

ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕ್ರೀಡೋಪಕರಣ ವಿತರಣೆ

Posted  36 Views updated 11 days ago

ಕೋಲಾರ

ಕೋಲಾರ: ತಾಲೂಕಿನ ಕ್ಯಾಲನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ (ಮಾಧ್ಯಮಿಕ ಶಾಲೆ) ಯಲ್ಲಿ ನೀಡುವ ಹೃದಯ ಫೌಂಡೇಶನ್ ವತಿಯಿಂದ ಕ್ರೀಡೋಪಕರಣಗಳನ್ನು ವಿತರಣಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನೀಡುವ ಹೃದಯ ಫೌಂಡೇಶನ್ ಸಂಸ್ಥಾಪಕರಾದ ಡಾ// ಆಂಟೊನಿ ಸಜ್ಜಿತ್ ತಾಲೂಕಿನ ವೇಮಗಲ್ ಹೋಬಳಿ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆ(ಮಾಧ್ಯಮಿಕ ವಿಭಾಗ) ಗೆ ಕ್ರೀಡೋಪಕರಣಗಳನ್ನ ನೀಡಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಓದುವ ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರ ತರಹ ಆಗಬೇಕು ಅಬ್ದುಲ್ ಕಲಾಂ ರೀತಿ ಆಗಬೇಕು ಕರ್ನಾಟಕದ ರಾಹುಲ್ ದ್ರಾವಿಡ್ ತರಹ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಶಾಲೆಯ ಮಕ್ಕಳು ಇರಬೇಕು ಈ ರೀತಿ ಆಗೋದರಿಂದ ನಮ್ಮ ತಂದೆ ತಾಯಿಗಳಿಗೆ ಮುತ್ತು ನಮಗೆ ವಿದ್ಯೆ ಬೋಧನೆ ಮಾಡುವ ಶಿಕ್ಷಕರಿಗೆ ಗೌರವ ನೀಡಿದಂತಾಗುತ್ತದೆ ನಾನು ಚಿಕ್ಕವನಿದ್ದಾಗ ನಾನು ಶಾಲೆಯಲ್ಲಿ ಸರಿಯಾಗಿ ಓದುತ್ತಿರಲಿಲ್ಲ ಆಗ ನನ್ನನ್ನ ಒಬ್ಬರು ನೀನು ಪೇಪರ್ ಮಾರುವುದಕ್ಕೆ ಲಾಯಕ್ ಎಂದು ಬೈದರು ಈ ಮಾತನ್ನೇ ನಾನು ಚಲವಾಗಿ ಪರಿಗಣಿಸಿ ರಾಜ್ಯದ ಒಂದು ಕಂಪನಿಗೆ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ರಾಜ್ಯದಲ್ಲಿರುವ ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದ್ದೇನೆ ಅದಕ್ಕೆ ಕಾರಣ ಛಲ ಇರಬೇಕು ಛಲ ಇದ್ದರೆ ಏನನ್ನು ಬೇಕಾದರೂ ಮಾಡಬಹುದು ಅದೇ ರೀತಿ ಚೆನ್ನಾಗಿ ಓದಿದರೆ ಮುಂದಿನ ನಿಮ್ಮ ಭವಿಷ್ಯ ಸುಖವಾಗಿರುತ್ತದೆ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದರಿಂದ ದೇಶಕ್ಕೆ ಏನನ್ನಾದರೂ ಕೊಡಬಹುದು ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ನಾರಾಯಣ ಮೂರ್ತಿ, ಪ್ರೌಡಶಾಲಾ ದೈಹಿಕ ಶಿಕ್ಷಕರಾದ ಜಿ ಎಂ ಶ್ರೀನಿವಾಸ್ , ಉರ್ದು ಶಾಲೆ ಮುಖ್ಯ ಶಿಕ್ಷಕ ನಸ್ರುಲ್ಲಾ ಖಾನ್, ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಶೀಲಾಕುಮಾರಿ, ಶಾಂತಕುಮಾರಿ, ಚಂದ್ರಕಲ, ಮಂಜುಳ, ಅಂಬರೀಷ್, ತೇಜಸ್ವಿನಿ, ಕವಿತ, ಶಿಲ್ಪ, ನೌಹೇರಾ, ಮನೋಜ್ ಕುಮಾರ್ ಹಾಗೂ ಮಧು ರವರು ಉಪಸ್ಥಿತರಿದ್ದರು.
 

Image

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕ್ರೀಡೋಪಕರಣ ವಿತರಣೆ
  • admin