ಕೃಷ್ಣರಾಜಪೇಟೆ
ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಕಾರು ಚಾಲಕರು ಮತ್ತು ಮಾಲಿಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು ಶಾಸಕ ಹೆಚ್ ಟಿ ಮಂಜು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿ ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು-ಸಂತರು-ದಾಸರು- ಶಿವಶರಣರು -ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ. ಎಂದರು ಅಲ್ಲಾದೆ ಎಲ್ಲಾ ಕಾರು ಚಾಲಕ ಮತ್ತು ಮಾಲಿಕರು ಕಡ್ಡಾಯವಾಗಿ ತಮ್ಮ ವಾಹನಗಳಿಗೆ ಇನ್ಶುರೆನ್ಸ್ ಮಾಡಿಸಿವಂತೆ ಮತ್ತು ವಾಹನ ಚಾಲಕರು ತಮ್ಮ ಚಾಲನ ಪರವಾನಿಗೆ ಪತ್ರವನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ರು. ಕಾರ್ಯಕ್ರಮದಲ್ಲಿ ಕಿಕ್ಕೇರಿ ಪೋಲೀಸ್ ಠಾಣೆಯ ನೀರಿಕ್ಷಕರಾದ ರೇವತಿ, ಜೆ.ಡಿ.ಎಸ್ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಕೃಷ್ಣೇಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಯಮ್ಮ, ರಕ್ಷಣಾ ವೇದಿಕೆಯ ಗುರುಮೂರ್ತಿ, ಸುರೇಶ್, ಶಿವು, ಸಾಮಾಜ ಸೇವಕ ಮೊಟ್ಟೆ ಮಂಜು, ಕಾಂತರಾಜು, ಅರುಣ್ ಕುಮಾರ್, ಕಾರು ಮತ್ತು ಚಾಲಕರ ಸಂಘದ ಆದ್ಯಕ್ಷ ದೀಲೀಪ್ ಕುಮಾರ್, ಉಪಾದ್ಯಕ್ಷ ಯೋಗೇಶ್, ಗೌರವಧ್ಯಾಕ್ಷರಾದ ರಘು, ಕೃಷ್ಣಪ್ಪ, ರಮೇಶ್, ಪ್ರಸನ್ನ, ಖಾಜಾಂಚಿ ಮಹೇಶ್, ರವಿ ಸೇರಿದಂತೆ ಸಂಘಟನೆಯ ಸದಸ್ಯರು ಸಾರ್ವಜನಿಕರು ಇದ್ದದ್ದು.

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು
ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456
0 Comments