ಡಾ. ಶಿವಕುಮಾರ. ಲಾ. ಸೂರ್ಯವಂಶಗೆ "ಗುರುಕುಲ ವಿದ್ಯಾರತ್ನ" ರಾಜ್ಯ ಪ್ರಶಸ್ತಿ.

ಡಾ. ಶಿವಕುಮಾರ. ಲಾ. ಸೂರ್ಯವಂಶಗೆ "ಗುರುಕುಲ ವಿದ್ಯಾರತ್ನ" ರಾಜ್ಯ ಪ್ರಶಸ್ತಿ.

Posted  36 Views updated 11 days ago

ತುಮಕೂರು


ಗುರುಕುಲ ಕಲಾ ಪ್ರತಿಷ್ಠಾನ(ರಿ) ಕೇಂದ್ರ ಸಮಿತಿ ತುಮಕೂರು ಹಾಗೂ ಜಿಲ್ಲಾ ಸಮಿತಿ ವಿಜಯನಗರ, ಇವರ ವತಿಯಿಂದ "ಸುವರ್ಣ ಕರ್ನಾಟ" ಸಂಭ್ರಮದ ಸವಿ ನೆನಪಿಗಾಗಿ ಹಮ್ಮಿಕೊಂಡಿರುವ ೩ನೇ ಅಖಿಲ ಭಾರತ ಗುರುಕುಲ ಕಲಾ ಸಮ್ಮೇಳನವನ್ನು ದಿನಾಂಕ :೧೮.೧೧.೨೦೨೩ ರಂದು ವಿಜಯನಗರ ಸಾಮ್ರಾಜ್ಯ ಎನಿಸಿಕೊಂಡಿರುವ ಹಂಪಿಯಲ್ಲಿನ ಹೇಮಕೂಟ ಶೂನ್ಯ ಸಿಂಹಾಸನ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠದಲ್ಲಿ ಜರುಗಿಸಲಾಯಿತು. ಡಾ. ಶಿವಕುಮಾರ. ಲಾ. ಸೂರ್ಯವಂಶ, ಕಲಬುರಗಿ ರವರು ಸುಮಾರು ೧೮ ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅವಿರತ ಸೇವೆಯನ್ನು ಮಾಡುತ್ತಿದ್ದು, ಅವರ ಅವಿರತ ಮತ್ತು ನಿಶ್ವಾರ್ಥ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಗಳನ್ನು ಪರಿಗಣಿಸಿ, ರಾಜ್ಯಮಟ್ಟದ "ಗುರುಕುಲ ವಿದ್ಯಾರತ್ನ" ರಾಜ್ಯ ಪ್ರಶಸ್ತಿಯನ್ನು ಗುರುಕುಲ ಕಲಾ ಪ್ರತಿಷ್ಠಾನ(ರಿ) ಕೇಂದ್ರ ಸಮಿತಿ, ತುಮಕೂರು ಹಾಗೂ ಜಿಲ್ಲಾ ಸಮಿತಿ, ವಿಜಯನಗರ ಇವರ ವತಿಯಿಂದ ಈ ರಾಜ್ಯಮಟ್ಟದ ಪ್ರಶಸ್ತಿಯನ್ನು ದಿನಾಂಕ:೧೮.೧೧.೨೦೨೩ ರಂದು ಹಂಪಿಯಲ್ಲಿ ನೀಡಿ ಗೌರವಿಸಲಾಯಿತು. ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ವಿದ್ಯಾ ವಾಸ್ಪತಿ ಡಾ. ಕವಿತಾಕೃಷ್ಣ, ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ, ಹುಲಿಯುರುದುರ್ಗ ಲಕ್ಷ್ಮಿನಾರಾಣರಾವ್, ಸಮ್ಮೇಳನಾಧ್ಯಕ್ಷರಾದ ಶ್ರೀ, ಡಾ. ಬಿ. ಜಿ. ಕನಕೇಶಮೂರ್ತಿ ಹಾಗೂ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಡಾ. ಶಿವರಾಜಗೌಡ, ಮತ್ತಿತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Image

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಡಾ. ಶಿವಕುಮಾರ. ಲಾ. ಸೂರ್ಯವಂಶಗೆ "ಗುರುಕುಲ ವಿದ್ಯಾರತ್ನ" ರಾಜ್ಯ ಪ್ರಶಸ್ತಿ.
  • admin