ಬೆಂಗಳೂರು
ಎಲ್ಲೆಡೆ ಭಾರಿ ಮಳೆಯಾಗುತ್ತಿರುವ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸಬರ ತುಂತುರು ಮಳೆ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ 3ನೇ ಬ್ಲಾಕ್ ಬೆಂಗಳೂರು 560056 ಇಲ್ಲಿ ನೆರವೇರಿತು. ಇದು ಚೈತ್ರದ ಪ್ರೇಮಾಂಜಲಿ ಚಿತ್ರ ಖ್ಯಾತಿಯ ರಘುವೀರ್ ಶಿಷ್ಯ ಹ್ಯಾಟ್ರಿಕ್ ಸೂರ್ಯ ಪಿ.ಎನ್ ಇವರ ಮೊದಲ ನಿರ್ದೇಶನದ ಚಿತ್ರ.
ಬಿಎಸ್ ವಿ ಪ್ರೊಡಕ್ಷನ್ಸ್ ರವರ ಪ್ರಥಮ ಕೊಡುಗೆ ತುಂತುರು ಮಳೆ ಚಿತ್ರೋದ್ಯಮದಲ್ಲಿ ಹಲವು ವರ್ಷಗಳು ವಿವಿಧ ವಿಭಾಗದಲ್ಲಿ ದುಡಿದ ಅನುಭವ ಇರುವ ಸೂರ್ಯ ರವರ ಮೊದಲ ಪ್ರಯತ್ನಕ್ಕೆ ಎಸ್.ಭಾಸ್ಕರನ್ (ಐಟಿಸಿ ಉದ್ಯೋಗಿ) ಇವರು ಬಂಡವಾಳ ಹೂಡುತ್ತಿದ್ದಾರೆ. ಸಿನೆಮಾ ಬಗ್ಗೆ ಅಪಾರ ಒಲವು ಉಳ್ಳ ಇವರು ಬಹಳ ವರ್ಷಗಳಿಂದ ಕನ್ನಡದಲ್ಲಿ ಚಿತ್ರ ನಿರ್ಮಿಸುವ ಕನಸು ಹೊತ್ತವರು ಹಲವರು ಚಿತ್ರ ನಿರ್ದೇಶನ ಮಾಡಿ ಕೊಡುತ್ತೇವೆಂದು ಬಂದವರು ಇವರಿಂದ ಹಣ ಕಿತ್ತಿದ್ದು ಬಿಟ್ಟರೆ ಚಿತ್ರ ನಿರ್ದೇಶನ ಮಾಡಲಿಲ್ಲಾ ಫೈನಾನ್ಸಿಯರ್ ಪ್ರಭಾಕರ್ ಮೂಲಕ ಸೂರ್ಯ ರವರ ಬಗ್ಗೆ ಭಾಸ್ಕರನ್ ಗೆ ತಿಳಿದು ಚಿತ್ರ ನಿರ್ಮಿಸುವ ಯೋಜನೆ ಶುರುವಾಗಿ ಅದರ ಫಲವಾಗಿ ತುಂತುರು ಮಳೆ ಕನ್ನಡ ಚಿತ್ರದ ಸ್ಕ್ರಿಪ್ಟ್ ಪೂಜಾ ಕಾರ್ಯ ನೆರವೇರಿತು ಸ್ಕ್ರಿಪ್ಟ್ ಪೂಜೆಗೆ ಕನ್ನಡ ಚಿತ್ರೋದ್ಯಮದ ಪ್ರಖ್ಯಾತ ಛಾಯಾಗ್ರಾಹಕ ಎಂ.ಆರ್.ಸೀನು ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಆಗಮಿಸಿ ನಿರ್ಮಾಪಕ ನಿರ್ದೇಶಕರ ಮೊದಲ ಪ್ರಯತ್ನಕ್ಕೆ ಶುಭಕೋರಿದರು. ಕಥೆ ಬಗ್ಗೆ ಸೂರ್ಯ ಹೇಳೋದೆನಂದ್ರೆ ಇದೊಂದು ಮಹಿಳಾ ಸಾಹಸ ಪ್ರಧಾನ ಚಿತ್ರ ಹಳೆ ಮತ್ತು ಹೊಸ ತಲೆಮಾರಿನ ಮನುಷ್ಯ ಸಂಬಂಧಗಳ ಪ್ರೀತಿ ಪ್ರಣಯ ಕುಟುಂಬ ವ್ಯವಸ್ಥೆಯ ಮೌಲ್ಯಗಳ ಬಗ್ಗೆ ಕಥೆ ಹೇಳುವಂತಹ ವಿಭಿನ್ನ ಪ್ರಯತ್ನ ಅಂತಾರೆ. ಐದು ವಿಭಿನ್ನ ಹಾಡುಗಳು ನಾಲ್ಕು ವಿಶೇಷ ರೀತಿಯ ಸಾಹಸಗಳು ಕಥೆಯೊಳಗೆ ಮಿಳಿತವಾಗಿದೆ ಚಿತ್ರೋದ್ಯಮದ ಪ್ರಮುಖ ಕಲಾವಿದರೊಂದಿಗೆ ಕೆಲವು ಹೊಸ ನಟ ನಟಿಯರ ಅಭಿನಯ ಚಿತ್ರದಲ್ಲಿರಲಿದೆ ರಾಜಪಥ ಚಿತ್ರದ ನಟ/ನಿರ್ಮಾಪಕ ಸಂತೋಷ್ ಹೆಚ್ ರಾಯ್ಕರ್ ರವರು ಬರವಣಿಗೆ ಮತ್ತು ಚಿತ್ರದ ಸಹ ನಿರ್ದೇಶಕರಾಗಿ ಸೂರ್ಯ ರವರ ಜೊತೆಯಾಗಿದ್ದಾರೆ. ತಂತ್ರಜ್ಞರ ಮತ್ತು ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ ಸಧ್ಯಕ್ಕೆ ಹಿರಿಯ ನಟಿ ರಾಧಾ ರಾಮಚಂದ್ರ ನಿರ್ಮಾಪಕ ಭಾಸ್ಕರನ್ ಅವರ ಮಗ ಮಾಸ್ಟರ್ ಸಚಿನ್ ದೀಪಕ ಆಯ್ಕೆ ಆಗಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ಎಂಆರ್.ಸೀನು (ಜೋಗಿ ಕರಿಯ ಸತ್ಯ ಇನ್ ಲವ್) ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ
ಸಾಹಿತ್ಯ ವಸಂತ ಕುಮಾರ್ (ಮಧುಗಿರಿ). ಪಿಆರ್ ಒ ನಾಗೇಂದ್ರ ಅಂದುಕೊಂಡಂತೆ ಆದರೆ 2024 ರ ಸಂಕ್ರಾಂತಿ ಸಮಯದಲ್ಲಿ ಕೊಡಗು, ಸಕಲೇಶಪುರ,ಚಿಕ್ಕಮಗಳೂರು, ಗೋಕರ್ಣ, ಕಾರವಾರ, ಬೆಂಗಳೂರು ಇನ್ನು ಮುಂತಾದಕಡೆ ಚಿತ್ರದ ಚಿತ್ರೀಕರಣ ಮಾಡುವ ಯೋಚನೆ ತುಂತುರು ಮಳೆ ಚಿತ್ರ ತಂಡದ್ದು ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸೂರ್ಯ ಅವರದು. ಹಣ ನೀಡಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವ ಪ್ರೇಕ್ಷಕ ಮಹಾಪ್ರಭುಗಳ ಮನಸೂರೆಗೊಳಿಸುವ ಭರವಸೆ ನೀಡುತ್ತಾರೆ ಯುವ ನಿರ್ದೇಶಕ ಹ್ಯಾಟ್ರಿಕ್ ಸೂರ್ಯ ಪಿ.ಎನ್,ನಿರ್ದೇಶಕ ಮತ್ತು ನಿರ್ಮಾಪಕರಿಗೆ ಶುಭ ಕೋರುತ್ತಾ ಈ ಲೇಖನ ಮುಗಿಸುವಷ್ಟರಲ್ಲಿ ಶುರುವಾಗಿತ್ತು ತುಂತುರು ಮಳೆ...!

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು
ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456
0 Comments