ನೈಸರ್ಗಿಕ ಕೃಷಿ ಪದ್ದತಿ ಅಡವಳಿಕೆಯಿಂದ 120  ಬಗೆ ಬಗೆಯ ಹಣ್ಣಿನ ಗಿಡಗಳು ಬೆಳದ ಕೃಷಿಕ  ವಿದ್ಯಾಭ್ಯಾಸ ಕೈ ಕೊಟ್ಟರೂ ಕೃಷಿ ಮಾತ್ರ ಕೈ ಬಿಡಲಿಲ್ಲ

ನೈಸರ್ಗಿಕ ಕೃಷಿ ಪದ್ದತಿ ಅಡವಳಿಕೆಯಿಂದ 120  ಬಗೆ ಬಗೆಯ ಹಣ್ಣಿನ ಗಿಡಗಳು ಬೆಳದ ಕೃಷಿಕ  ವಿದ್ಯಾಭ್ಯಾಸ ಕೈ ಕೊಟ್ಟರೂ ಕೃಷಿ ಮಾತ್ರ ಕೈ ಬಿಡಲಿಲ್ಲ

Posted  41 Views updated 11 days ago

ಕೃಷ್ಣರಾಜಪೇಟೆ

ನೈಸರ್ಗಿಕ ಕೃಷಿ ಪದ್ದತಿ ಅಡವಳಿಕೆಯಿಂದ 120  ಬಗೆ ಬಗೆಯ ಹಣ್ಣಿನ ಗಿಡಗಳು ಬೆಳದ ಕೃಷಿಕ  ವಿದ್ಯಾಭ್ಯಾಸ ಕೈ ಕೊಟ್ಟರೂ ಕೃಷಿ ಮಾತ್ರ ಕೈ ಬಿಡಲಿಲ್ಲ

ಕೃಷ್ಣರಾಜಪೇಟೆ: ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಂಡಲಿಕನಹಳ್ಳಿ  ಗ್ರಾಮದ ರಾಜೇಗೌಡ ಎಂಬುವವರು 120 ಬಗೆ ಬಗೆಯ ಹಣ್ಣಿನ ಗಿಡಗಳನ್ನು ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ. ತಮ್ಮಲ್ಲಿರುವ ನಾಲ್ಕು ಎಕರೆ ಭೂಮಿಯಲ್ಲಿ ಫಲವತ್ತಾದ ಭೂಮಿಯಲ್ಲಿ ರಾಸಾಯನಿಕ ಗೌಬ್ಬರ ಬಳಕೆ ಮಾಡದೆ  ಸಾವಯುವ ಕೃಷಿ ಪದ್ದತಿ ಅಳವಡಿಕೆ ಮಾಡಿಕೊಂಡು   ಬಗೆ ಬಗೆಯ  ಹಣ್ಣಿನ ಗಿಡಗಳು , ಕಬ್ಬು,  ತೆಂಗು, ಶುಂಠಿ, ಸಿರಿ ಧ್ಯಾನ್ಯ, ಸೇಬು, ಮೂಸಂಬಿ, ಕಿತ್ತಳೆ, ದಾಳಿಂಬೆ, ಕೊಕ್ಕೂ, ರಾಮ್ ಪಲ, ಸೀತಾ ಪಲ, ದ್ರಾಕ್ಷಿ,  ಸೇರಿದಂತೆ 120 ಬಗೆ ಬಗೆಯ ಹಣ್ಣಿನ ಗಿಡಗಳು ಮೀನು ಸಾಕಾಣಿಕೆ ಜೇನು ಸಾಕಾಣಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ಸೇರಿದಂತೆ ಹೂವಿನ ಗಿಡಗಳು, ತರಕಾರಿಗಳನ್ನು  ಬೆಳೆದಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಮುಕ್ತಿ ನೀಡಿ ತೆಂಗಿನ ಗರಿಗಳು, ಒಣಗಿ ಬೀಳುವ ಎಲೆಗಳು, ಕಸ ಬಳಸಿಕೊಂಡು ಸಾವಯುವ (ಎರೆಹುಳು) ಗೊಬ್ಬರ ತಯಾರಿಸಿಕೊಳ್ಳುತ್ತಿದಾರೆ. ಇದೇ ಗೊಬ್ಬರ ಬಳಸಿಕೊಂಡು ನಾನಾ ರೀತಿ ಬೆಳೆ ಬೆಳೆದು ಅಧಿಕ ಇಳುವರಿ ತೆಗೆಯುವ ಮೂಲಕ ಇತರ ರೈತರಿಗೆ ಮಾರ್ಗದರ್ಶಿಯಾಗಿದ್ದಾರೆ.

ಗೊಬ್ಬರ ತಯಾರಿಸುವುದು ಹೇಗೆ?
 ತೆಂಗಿನ ತೋಟದಲ್ಲಿ ಬೀಳುವ ತೆಂಗಿನ ಗರಿಗಳು, ತೆಂಗಿನ ಕಾಯಿ ಸುಲಿದ ಸಿಪ್ಪೆಗಳು, ತರಗೆಲೆ ಜತೆಗೆ ದೇಸಿ ತಳಿಯ ರಾಸುಗಳ ಸಗಣಿ ಮತ್ತು ಕುರಿ ಹಿಕ್ಕೆಯನ್ನು ಸಂಗ್ರಹಿಸುತ್ತಾರೆ. ಅಲ್ಲದೇ, ಜಮೀನಿನಲ್ಲೇ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಂದುಗೂಡಿಸಿ ಒಂದು ಹೊಂಡವನ್ನು ನಿರ್ಮಾಣ ಮಾಡಿಕೊಂಡು ಅದರಲ್ಲಿ  ಮಿಶ್ರಣ ಮಾಡುತ್ತಾರೆ. ಒಂದು ತಿಂಗಳ ನಂತರ ಎರೆಹುಳುವಿನ ಸಹಾಯದಿಂದ ಜೈವಿಕ ಗೊಬ್ಬರವಾಗಿ ಮಾರ್ಪಡುತ್ತದೆ. ಇದೇ ಗೊಬ್ಬರವನ್ನು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳಿಗೆ ಬಳಸಿಕೊಂಡು ತಾವು ಬೆಳೆಯವು ಬೆಳೆಗಳಿಗೆ ತಾವೇ ಔಷದಿ ತಾಯಾರು ಮಾಡಿಕೊಂಡು ಅದನ್ನೇ ಬಳಕೆ ಮಾಡಿಕೊಂಡು ಹೆಚ್ಚುವರಿ ಇಳುವರಿ ಪಡೆಯುತ್ತಿದ್ದಾರೆ. ಕಾರ್ಮಿಕರ ಕೊರತೆ ಇರುವ ಕಾರಣ ಕೃಷಿ ಚಟುವಟಿಕೆಗಳಿಗೆ ನನ್ನ ಹೆಂಡತಿ ಕಾಂಚನ ರವರ ಸಹಕಾರ ನೀಡುತ್ತಿದ್ದಾರೆ ಯಾವುದೇ ರೈತರಿಗೆ ಸಾವಯುವ ಕೃಷಿ ಪದ್ದತಿಯ ಬಗ್ಗೆ ಮಾಹಿತಿ ಬೇಕಿದ್ದರೆ ನನ್ನ ಜಮೀನಿಗೆ ಬೇಟಿ ನೀಡಿ ಪರಿಶೀಲಸಬಹುದು ಹೆಚ್ಚಿನ ಮಾಹಿತಿಗೆ ನನ್ನ ಸಂಪರ್ಕ ಮಾಡಬುದು 9845418315 ಎನ್ನುತ್ತಾರೆ ಪಗತಿ ರೈತ ರಾಜೇಗೌಡ, ಒಟ್ಟಾರೆ ಸರ್ಕಾರ ಇಂತಹ ರೈತರನ್ನು ಗುರುತಿಸಿ ಹೆಚ್ಚಿನ ಸಹಕಾರ ನೀಡಬೇಕೆಂಬುದೇ ನಮ್ಮ ವಾಹಿನಿಯ ಕಳ ಕಳಿ ಯಾಗಿದೆ.

Image

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ನೈಸರ್ಗಿಕ ಕೃಷಿ ಪದ್ದತಿ ಅಡವಳಿಕೆಯಿಂದ 120  ಬಗೆ ಬಗೆಯ ಹಣ್ಣಿನ ಗಿಡಗಳು ಬೆಳದ ಕೃಷಿಕ  ವಿದ್ಯಾಭ್ಯಾಸ ಕೈ ಕೊಟ್ಟರೂ ಕೃಷಿ ಮಾತ್ರ ಕೈ ಬಿಡಲಿಲ್ಲ
  • admin