ನ.22 ರಂದು ಶ್ರೀಲಂಕಾದಲ್ಲಿ 57ನೇ ಅಂತರಾಷ್ಟ್ರೀಯ ನೃತ್ಯೋತ್ಸವವನ್ನು ಶ್ರೀಲಂಕಾದ ಪ್ರಧಾನಿ ಉದ್ಘಾಟನೆ ಮಾಡಲಿದ್ದಾರೆ-ಸ್ವಾತಿ ಪಿ. ಭಾರದ್ವಾಜ್

ನ.22 ರಂದು ಶ್ರೀಲಂಕಾದಲ್ಲಿ 57ನೇ ಅಂತರಾಷ್ಟ್ರೀಯ ನೃತ್ಯೋತ್ಸವವನ್ನು ಶ್ರೀಲಂಕಾದ ಪ್ರಧಾನಿ ಉದ್ಘಾಟನೆ ಮಾಡಲಿದ್ದಾರೆ-ಸ್ವಾತಿ ಪಿ. ಭಾರದ್ವಾಜ್

Posted  33 Views updated 11 days ago

ಹಾಸನ:

ಹಾಸನ: ಚನ್ನರಾಯಪಟ್ಟಣದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಹಾಗೂ ಶ್ರೀಲಂಕಾ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ 57ನೇ ಅಂತರಾಷ್ಟ್ರೀಯ ನೃತ್ಯೋತ್ಸವ" ಕಾರ್ಯಕ್ರಮವನ್ನು ನವೆಂಬರ್ 22ರ ಬುಧವಾರದಂದು ಶ್ರೀಲಂಕದಲ್ಲಿ ಪ್ರಧಾನಿ ಮಂತ್ರಿಗಳ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಜರುಗಲಿದೆ ಎಂದು ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ ಕಾರ್ಯದರ್ಶಿ ಡಾ. ಸ್ವಾತಿ ಪಿ. ಭಾರಧ್ವಾಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಚನ್ನರಾಯಪಟ್ಟಣದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯು ಅಂತರಾಷ್ಟ್ರೀಯ ದೇಶಗಳ ಸರ್ಕಾರಗಳ ಸಹಕಾರದೊಂದಿಗೆ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ರಾಷ್ಟ್ರೀಯ ನೃತ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಶ್ರೀಲಂಕಾದಲ್ಲಿ 57ನೇ ಅಂತರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ ಹಾಗೂ ಶ್ರೀಲಂಕಾ ಸರ್ಕಾರದ ಸಂಯುಕ್ತ ಆಶ್ರಯದಲ್ಲಿ 57ನೇ ಅಂತರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಏಷ್ಯಾ ಖಂಡದಲ್ಲಿಯೇ ವಿಶೇಷತೆಯನ್ನು ಹೊಂದಿರುವ ಶ್ರೀಲಂಕಾ ಬಂಡಾರ ನಾಯಕ ಮೆಮೋರಿಯಲ್ ಇಂಟರ್‌ನ್ಯಾಶನಲ್ ಬಿ.ಎಂ.ಐ.ಸಿ.ಹೆಚ್. ಕಾನ್ಯರೆನ್ಸ್ ಹಾಲ್, ಕೊಲಂಬೊದಲ್ಲಿ ನವಂಬರ್ 22ರಂದು ನೆಡೆಯುವ ನೃತ್ಯೋತ್ಸವ ಕಾರ್ಯಕ್ರಮವನ್ನು ಶ್ರೀಲಂಕಾ ಸನ್ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ದಿನೇಶ್ ಗುಣವರ್ಧನ ರವರು ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದರು. ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ 8 ವಿಧದ ಶಾಸ್ತ್ರೀಯ ನೃತ್ಯಗಳನ್ನು ಒಂದೆಡೆಗೆ ಸೇರಿಸಿ ಭಾರತ ದೇಶಾದ್ಯಂತ ವಿವಿಧ ಭಾಗಗಳಿಂದ 5 ರಿಂದ 6೦ ವರ್ಷ ವಯಸ್ಸಿನ ಸುಮಾರು 50 ಕ್ಕೂ ಹೆಚ್ಚು ಪ್ರತಿಭಾವಂತ ಕಲಾವಿದರು, ನೃತ್ಯ ಗುರುಗಳು ಭಾಗವಹಿಸಲಿದು, ಕಲಿತಿರುವ, ಕಲಿಯುತ್ತಿರುವ ವೇದಿಕೆ ವಂಚಿತ ಕಲಾವಿದರಿಗಾಗಿ ನಡೆಯುತ್ತಿರುವ ಈ ಕಾರ್ಯಕ್ರಮವು ಕೇವಲ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಮೀಸಲಾಗದೆ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಹೊರತಂದು ವೇದಿಕೆ ಕಲ್ಪಿಸಿ ಕೊಡುವ ಹಿನ್ನಲೆಯಲ್ಲಿ 1000 ನೃತ್ಯೋತ್ಸವಗಳನ್ನು ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.2007ರಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯು ಶಾಸ್ತ್ರೀಯ ನೃತ್ಯಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದ ಭಾರತ ದೇಶಾದ್ಯಂತ 8 ಶಾಸ್ತ್ರೀಯ ನೃತ್ಯಗಳಲ್ಲಿ ಪರಿಣಿತಿ ಹೊಂದಿದ 5 ರಿಂದ 7೦ ವರ್ಷ ವಯಸ್ಸಿನ ಕಲಾವಿದರನ್ನು ಒಂದೆಡೆಗೆ ಸೇರಿಸಿ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮವನ್ನು ಈವರೆಗೆ ತಾಲೂಕು, ಜಿಲ್ಲೆಯ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದೇವೆ. ಈವರೆಗೆ ಸುಮೂರು 10000 ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡಲಾಗಿದೆ. ಜೊತೆಗೆ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಹಾಸನ ಜಿಲ್ಲೆಯ ರಾಮನಾಥಪುರದ ಕಾವೇರಿ ನದಿಯ ಮೇಲೆ ನಡೆದ ನೃತ್ಯ ಸಂಗಮ-2022 ಕಾರ್ಯಕ್ರಮವು ಕರ್ನಾಟಕ ಬುಕ್ ಆಫ್ ರೆಕಾರ್ಡ್ ನಲ್ಲಿ ಸೇರಿದೆ.
ಪತ್ರಿಕಾಗೋಷ್ಠಿಯಲ್ಲಿ ಭರತ್ ನಾಟ್ಯೆ ಕಲಾವಿಧೆ ಸ್ವಾತಿ ಪಿ ಭಾರಧ್ವಾಜ್ ತಂದೆ ಪ್ರಕಾಶ್, ತಾಯಿ ನ್ಯಾಷನಲ್ ಕ್ಲಾಸಿಕ್ ಡ್ಯಾನ್ಸ್ ಅಕಾಡೆಮಿ ಅಧ್ಯಕ್ಷ ಕೆ.ಆರ್, ಅನಿತಾ, ಪ್ರಕಾಶ್, ರಾಜ್ಯ ಸಂಚಾಲಕ ರಮೇಶ್ ಸೇರಿದಂತೆ ಇತರರು ಹಾಜರಿದ್ದರು

Image

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ನ.22 ರಂದು ಶ್ರೀಲಂಕಾದಲ್ಲಿ 57ನೇ ಅಂತರಾಷ್ಟ್ರೀಯ ನೃತ್ಯೋತ್ಸವವನ್ನು ಶ್ರೀಲಂಕಾದ ಪ್ರಧಾನಿ ಉದ್ಘಾಟನೆ ಮಾಡಲಿದ್ದಾರೆ-ಸ್ವಾತಿ ಪಿ. ಭಾರದ್ವಾಜ್
  • admin