ರಸ್ತೆ ಅಪಘಾತ ಬೆಮಲ್ ಉದ್ಯೋಗಿ ಸಾವು

ರಸ್ತೆ ಅಪಘಾತ ಬೆಮಲ್ ಉದ್ಯೋಗಿ ಸಾವು

Posted  39 Views updated 11 days ago

 ಕೆಜಿಎಫ್

 ಕೆಜಿಎಫ್:  ಬೆಮಲ್ ಕಾರ್ಖಾನೆ ಮುಂಭಾಗ ರಸ್ತೆಯನ್ನು ದಾಟುವಾಗ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಬೆಮಲ್ ಉದ್ಯೋಗಿ ಡಿಜಿಎಂ ಓಂ ಪ್ರಕಾಶ್ ರವರಿಗೆ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ  ಕಳಸಿದ ಸಂದರ್ಭದಲ್ಲಿ ರಸ್ತೆ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಅವರು ಎಂದಿನಂತೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸಿ ರಸ್ತೆ ದಾಟುವ ಸಂದರ್ಭದಲ್ಲಿ ಈ ದುರ್ಘಟನೆ  ನಡೆದಿದೆ. ಇದಕ್ಕೆ ಪ್ರಮುಖ ಕಾರಣ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಗುತ್ತಿಗೆದರ ನಿರ್ಲಕ್ಷ ಎದ್ದು ತೋರುತ್ತಿದೆ ಕಾಮಗಾರಿಯನ್ನು ವೇಗವಾಗಿ ಮಾಡಿದ್ದರೆ ಈ ಘಟನೆ ಸಂಭವಿಸುತ್ತಿಲ್ಲ ಕಾಮಗಾರಿ ಅರ್ಧ ಮಾಡಿಬಿಟ್ಟಿದ್ದಾರೆ. ಇಂತಹ ನಿರ್ಲಕ್ಷ ಮಾಡುವ ರಸ್ತೆ ಗುತ್ತಿಗೆದಾರರ ಮೇಲೆ ಸರ್ಕಾರದ ವತಿಯಿಂದ ಸೂಕ್ತ ಕ್ರಮ ಕೈಗೊಂಡು ಪ್ರಥಮ ದರ್ಜೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಾರ್ವಜನಿಕರ ಆಗ್ರಹಿಸಿದರು. ಕೆಜಿಎಫ್ ತಾಲೂಕಿನಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಆರಕ್ಕೂ ಹೆಚ್ಚು ಜನ  ಮೃತ ಪಟ್ಟಿದ್ದಾರೆ. ಇದಕ್ಕೆ ಪ್ರಮುಖ ಕಾರಣ ರಸ್ತೆ ಗುಂಡಿಗಳು. ಈಗಲಾದರೂ ಸರ್ಕಾರದ ಜನಪ್ರತಿನಿಧಿಗಳು ಅಧಿಕಾರಿಗಳು ಪ್ರಮುಖ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಹಂಪು ನಿರ್ಮಿಸಬೇಕು. ಖಾಸಗಿ ಬಸ್ ವಾಹನಗಳು ಅತಿ ಹೆಚ್ಚು ವೇಗವಾಗಿ ಸಂಚಾರಿಸುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು  ಬಸ್ ಮಾಲೀಕರ ಮೇಲೆ ಚಾಲಕರ ಮೇಲೆ ಹಾಗೂ ಇದಕ್ಕೆ ಸಂಬಂಧಿಸಿದ ಪಿಡಬ್ಲ್ಯೂಡಿ ಗುತ್ತಿಗೆದಾರರ ಮೇಲೆ ಸೂಕ್ತ ರೀತಿ ಕ್ರಮ ಕೈಗೊಳ್ಳಬೇಕು. ಎಂದು ಸಾರ್ವಜನಿಕರ ಆಗ್ರಹ. ಇನ್ನಾದರೂ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

Image

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments