ಸಾರ್ವಜನಿಕರ ಕೆಲಸಗಳು ಮಾಡಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಶಾಸಕ ಎಸ್.ಏನ್.ಸುಬ್ಬಾರೆಡ್ಡಿ

ಸಾರ್ವಜನಿಕರ ಕೆಲಸಗಳು ಮಾಡಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಶಾಸಕ ಎಸ್.ಏನ್.ಸುಬ್ಬಾರೆಡ್ಡಿ

Posted  71 Views updated 2 months ago

ಬಾಗೇಪಲ್ಲಿ: ನಮ್ಮ ಸಮಾಜಕ್ಕೊಂದು ಸ್ಮಶಾನ ನಿರ್ಮಿಸಿಕೊಳ್ಳಲು ಭೂಮಿ ಕೊಡಿ, ನನ್ನ ಮಗನಿಗೆ ಹಾಸ್ಟೆಲ್‌ನಲ್ಲಿ ಅವಕಾಶ ಕಲ್ಪಿಸಿಕೊಡಿ, ಹಲವು ವರ್ಷಗಳಿಂದ ಅಲೆದಾಡಿದರೂ ಹಕ್ಕುಪತ್ರ ಸಿಕ್ಕಿಲ್ಲ. ಸರ್ವೆ ಸಂಖ್ಯೆ ಅದಲು ಬದಲು ಮಾಡಲಾಗಿದ್ದು, ಇದನ್ನು ಸರಿಪಡಿಸಿ,ಉದ್ಯೋಗವಿಲ್ಲದೇ ಅಲೆದಾಡುತ್ತಿದ್ದೇನೆ, ನನಗೊಂದು ನೌಕರಿ ಕೊಡಿ ಎಂದು ಸಾರ್ವಜನಿಕರು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಪಟ್ಟಣದ ಶಾಸಕ ಎಸ್.ಏನ್. ಸುಬ್ಬಾರೆಡ್ಡಿ ರವರ ಗೃಹ ಕಚೇರಿಯಲ್ಲಿ ಎಂದಿನಂತೆ ಪ್ರತಿ ಬುಧವಾರ ಸಾರ್ವಜನಿಕರ ಅನುಕೂಲಕ್ಕಾಗಿ ಜನತಾ ದರ್ಶನ ಆಯೋಜಿಸಲಾಗಿತ್ತು. ನಡೆದ ಹೊಸ ಸರ್ಕಾರದ ಮೊದಲ ಜನತಾ ದರ್ಶನ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಾರ್ವಜನಿಕರಿಂದ ಬಂದ ಅಹವಾಲುಗಳು ಇವು.ಸ್ವಲ್ಪ ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಒಟ್ಟು 122 ಅರ್ಜಿಗಳು ಸಲ್ಲಿಕೆಯಾದವು. ಶಾಸಕರ ಬಳಿ ಸಮಸ್ಯೆಗಳನ್ನು ಹೇಳಿಕೊಂಡ ಜನರು ಕೆಲ ಅರ್ಜಿಗಳು ವೈಯಕ್ತಿವಾಗಿದ್ದವು. ಖಾಸಗಿ ಶಾಲೆಗೆ ಪ್ರವೇಶ ಕೊಡಿಸಲು ಆರ್ಥಿಕ ನೆರವು ಒದಗಿಸಿ, ಹಳೆ ಪಿಂಚಣಿ ಯೋಜನೆ ಜಾರಿ ಮಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಕಲ್ಪಿಸಿ, ಮೂರು ದಶಕಗಳಿಂದ ಸಾಗುವಳಿ ಪತ್ರ ಕೊಟ್ಟಿಲ್ಲ. ಅಣ್ಣ–ತಮ್ಮನ ಆಸ್ತಿ ವಿವಾದವಿದ್ದು ಪರಿಹರಿಸಿಕೊಡಿ, ಭಾಗ್ಯನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಡಿ, ವಿದ್ಯುತ್‌ ಮೀಟರ್‌ಗೆ ಆರ್‌.ಆರ್‌. ಸಂಖ್ಯೆ ಕೊಡಿ ಹೀಗೆ ಅನೇಕ ಸಮಸ್ಯೆಗಳನ್ನು ಜನ ಹೇಳಿಕೊಂಡರು. ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸುವ ಪ್ರಯತ್ನ ಮಾಡಿದ ಅವರು ಅಧಿಕಾರಿಗಳ ಬಳಿ ಚರ್ಚಿಸಿ ಸಾರ್ವಜನಿಕರಿಗೆ ಆಗಬೇಕಾದ ಸರ್ಕಾರಿ ಕೆಲಸಗಳನ್ನು ಮಾಡಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನಿಮಗಾಗಿ ನಾನು ಇದ್ದೇನೆ ಎಂದು ಭರವಸೆ ನೀಡಿದರು. ಈ ಮುಖಂಡರಾದ ಗುಂಟಿಗಾನಪಲ್ಲಿ ಮಂಜುನಾಥ ರೆಡ್ಡಿ, ಬುರಗಮಡಗು ನರಸಿಂಹಪ್ಪ, ಮಲ್ಲಿಕಾರ್ಜುನ ರೆಡ್ಡಿ, ಸುಧಾಕರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಶಿವ ರಾಮ ರೆಡ್ಡಿ, ಸೇರಿದಂತೆ ವಿವಿಧ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
 

ಸುದ್ದಿ ಕಿರಣ ಟಿವಿ ಬಾಳಿನ ಬೆಳಕು 

ನಮ್ಮ ಈ ವರದಿಯ ಲಿಂಕ್ ನ್ನು ಒಪನ್ ಮಾಡಿ, ಲೈಕ್ ಮಾಡಿ suddikirana.com SUBSCRIBE ಮಾಡಿ ಬೆಲ್ ಬಟನ್ ಒತ್ತೋದನ್ನು ಮಾತ್ರ ಮರಿಬೇಡಿ ಜೊತೆಗೆ ಇನ್ನಷ್ಟು ಮಂದಿಗೆ ಶೇರ್ ಮಾಡಿ ಸುದ್ದಿ ಮತ್ತು ಜಾಹೀರಾತುಗಳುಗಾಗಿ ಸಂಪರ್ಕಿಸಿ :96866 65456


Your reaction?

0
LOL
0
LOVED
0
PURE
0
AW
0
FUNNY
0
BAD!
0
EEW
0
OMG!
0
ANGRY
0 Comments

  • ಸಾರ್ವಜನಿಕರ ಕೆಲಸಗಳು ಮಾಡಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ-ಶಾಸಕ ಎಸ್.ಏನ್.ಸುಬ್ಬಾರೆಡ್ಡಿ
  • admin