ಕಪ್ಪೆಟ್ಟು ಅಂಬೇಡ್ಕರ್ ಭವನ ಉದ್ಘಾಟನೆ
(ಸುದ್ದಿಕಿರಣ ವರದಿ)
ಉಡುಪಿ: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಉಡುಪಿ ಮತ್ತು ಅಂಬಲಪಾಡಿ ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಕಿದಿಯೂರು, ಕಪ್ಪೆಟ್ಟು ಎಂಬಲ್ಲಿ ನಿರ್ಮಿಸಿರುವ ನೂತನ ಅಂಬೇಡ್ಕರ್ ಭವನವನ್ನು ಮಂಗಳವಾರ ಶಾಸಕ ರಘುಪತಿ ಭಟ್ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಪಾಧ್ಯಕ್ಷ ಸೋಮನಾಥ್ ಬಿ. ಕೆ., ಅಂಬೇಡ್ಕರ್ ಭವನ ಅಧ್ಯಕ್ಷ ಮಂಜುನಾಥ್ ಕಪ್ಪೆಟ್ಟು, ದಲಿತ ಮುಖಂಡ ಜಯನ್ ಮಲ್ಪೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್, ಅಂಬಲಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಮೊದಲಾವರಿದ್ದರು.