Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಅತಿವೃಷ್ಟಿ: 24.73 ಕೋ. ಹಾನಿ

ಅತಿವೃಷ್ಟಿ: 24.73 ಕೋ. ಹಾನಿ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 8

ಅತಿವೃಷ್ಟಿ: 24.73 ಕೋ. ಹಾನಿ
ಉಡುಪಿ: ಕಳೆದ ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಸುಮಾರು 24.73 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜುಲೈ 1ರಿಂದ ಇದುವರೆಗಿನ ವಾಡಿಕೆ ಮಳೆ 367 ಮಿ.ಮೀ. ಆದರೆ, ಈಗಾಗಲೇ 832 ಮಿ.ಮೀ. ಮಳೆಯಾಗಿದೆ. ಭಾರೀ ಮಳೆಯಿಂದಾಗಿ 250 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದೆ. ನಗರ ಪ್ರದೇಶದಲ್ಲಿ 93 ಕಿ.ಮೀ. ಮತ್ತು ಗ್ರಾಮೀಣ ಭಾಗದ 685 ಕಿ.ಮೀ.ನಷ್ಟು ರಸ್ತೆ, ಜಿಲ್ಲೆ ಹಾಗೂ ರಾಜ್ಯ ಮಟ್ಟದ 7.5 ಕಿ.ಮೀ. ಮುಖ್ಯ ರಸ್ತೆ ಹಾಳಾಗಿದೆ. 13 ಸೇತುವೆಗಳಿಗೆ ಹಾನಿಯುಂಟಾಗಿದೆ.

ಜಿಲ್ಲೆಯಲ್ಲಿ 1,515 ವಿದ್ಯುಚ್ಛಕ್ತಿ ಕಂಬಗಳು ಬಿದ್ದಿವೆ. 47 ಕಿ.ಮೀ.ನಷ್ಟು ವಿದ್ಯುತ್ ತಂತಿ ಹಾಳಾಗಿವೆ.

64 ಮನೆಗಳು ಭಾಗಶಃ ಹಾನಿಯಾಗಿವೆ. ಒಟ್ಟು ಅಂದಾಜು 24.73 ಕೋಟಿಯಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇನ್ನೂ ನಿರಂತರ ಮಳೆ ಮುಂದುವರಿದಿದ್ದು, ನಷ್ಟದ ನಿಖರ ಮೊತ್ತ ಮೌಲ್ಯಮಾಪನ ಅಸಾಧ್ಯವಾಗಿದ್ದು, ನಷ್ಟದ ಪ್ರಮಾಣ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ ಎಂದು ಡಿಸಿ ಕೂರ್ಮಾರಾವ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!