Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಅಧ್ಯಾಪಕರ ಅಭಿವೃದ್ಧಿ ಸರಣಿ ಕಾರ್ಯಕ್ರಮ

ಅಧ್ಯಾಪಕರ ಅಭಿವೃದ್ಧಿ ಸರಣಿ ಕಾರ್ಯಕ್ರಮ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ರಿಸರ್ಚ್ ಮೆಥೊಡೋಲಜಿ ಮತ್ತು ಮೆಡಿಕಲ್ ಸ್ಟ್ಯಾಟಿಸ್ಟಿಕ್ ವಿಭಾಗ ವತಿಯಿಂದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳ ಸರಣಿ ಕಾರ್ಯಕ್ರಮ ನಡೆಯಿತು.

ಕಾಲೇಜು ಪ್ರಾಂಶುಪಾಲೆ ಡಾ. ಮಮತಾ ಕೆ. ವಿ. ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಶೋಧನ ಕೇಂದ್ರ ಪ್ರಾಂಶುಪಾಲ ಡಾ. ಪಾಲಾಕ್ಷ ಕೆ. ಜೆ., ದೇಶದ ಅಭಿವೃದ್ಧಿಗೆ ಸಂಶೋಧನೆಯ ಮಹತ್ವ ವಿವರಿಸಿದರು.

ಸಂಪನ್ಮೂಲವ್ಯಕ್ತಿಗಳಾಗಿ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಶೋಧನ ಕೇಂದ್ರದ ಸಹಪ್ರಾಧ್ಯಾಪಕರಾದ ಡಾ. ರೇಣುಕಾರಾಧ್ಯ ಕೆ. ಮತ್ತು ಡಾ. ಅಜಯ್ ಕುಮಾರ್ ಓಲಿ ಆಗಮಿಸಿದ್ದರು. ಸಂಶೋಧನೆ ಪ್ರಾಯೋಜಕತ್ವ ಸಂಸ್ಥೆಗಳು ಮತ್ತು ಸಂಶೋಧನ ಪ್ರಸ್ತಾವನೆ ಯೋಜನೆ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್., ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ. ನಿರಂಜನ್ ರಾವ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಸುಚೇತಾ ಕುಮಾರಿ ಹಾಗೂ ಸಹಾಯಕ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಇದ್ದರು.

ರಿಸರ್ಚ್ ಮೆಥೊಡೋಲಜಿ ಮತ್ತು ಮೆಡಿಕಲ್ ಸ್ಟ್ಯಾಟಿಸ್ಟಿಕ್ ವಿಭಾಗ ಮುಖ್ಯಸ್ಥ ಡಾ. ಪದ್ಮಕಿರಣ್ ಸಿ., ಸದಸ್ಯರಾದ ಡಾ. ರವಿಕೃಷ್ಣ ಎಸ್. ಮತ್ತು ಡಾ. ಸಂದೇಶ್ ಶೆಟ್ಟಿ ಸಂಯೋಜಿಸಿದ್ದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಸಂಶೋಧನ ಕೇಂದ್ರದ ಹಿರಿಯ ಸಂಶೋಧನ ಅಧಿಕಾರಿ ನವೀನಚಂದ್ರ ಎನ್. ಎಚ್. ಸ್ವಾಗತಿಸಿ, ಸುಚಿತ್ರ ಕಿಣಿ ವಂದಿಸಿದರು. ಸ್ನಾತಕೋತ್ತರ ವಿಭಾಗದ ಅನನ್ಯ ನಿರೂಪಿಸಿದರು.

ಕಾಲೇಜಿನ ಎಲ್ಲಾ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!