Wednesday, July 6, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಅನಾಥ ಮಕ್ಕಳಿಗೆ ನೆರವು

ಅನಾಥ ಮಕ್ಕಳಿಗೆ ನೆರವು

ನವದೆಹಲಿ: ಕೋವಿಡ್ 19 ಸೋಂಕಿನಿಂದ ತಂದೆ- ತಾಯಿಯರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ಅಡಿಯಲ್ಲಿ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಅನಾಥರಾದ ಮಕ್ಕಳಿಗೆ ಅವರ ವಯಸ್ಸು 18 ಆಗುತ್ತಿದ್ದಂತೆ ಅವರಿಗೆ ಮಾಸಿಕ ವೇತನ ನೀಡಲಾಗುವುದು. 23 ವರ್ಷ ತುಂಬಿದ ನಂತರ ಪಿಎಂ ಕೇರ್ಸ್ ನಿಂದ 10 ಲಕ್ಷ ರೂ. ನಗದು ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ.

ಉನ್ನತ ಶಿಕ್ಷಣ ಪಡೆಯುಲು ಮುಂದಾಗುವ ಮಕ್ಕಳಿಗೆ ಶಿಕ್ಷಣ ಸಾಲದ ವ್ಯವಸ್ಥೆಯನ್ನೂ ಮಾಡಲಾಗುವುದು. ಬಡ್ಡಿಯನ್ನು ಕೇಂದ್ರ ಸರ್ಕಾರವೇ ಪಾವತಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!