ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 30
ಅನಾಥ ಶವಗಳ ಅಂತ್ಯಸಂಸ್ಕಾರ
ಉಡುಪಿ: ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದ ಎರಡು ಅನಾಥ ಪುರುಷ ಶವಗಳ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಶುಕ್ರವಾರ ಬೀಡಿನಗುಡ್ಡೆ ದಫನ ಭೂಮಿಯಲ್ಲಿ ನಡೆಸಿತು.
ತನಿಖಾ ಸಹಾಯಕ ವಿಶ್ವನಾಥ ಶೆಟ್ಟಿ ಅಮಾಸೆಬೈಲು ಕಾನೂನು ಪ್ರಕ್ರಿಯೆ ನಡೆಸಿದರು.
ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಹೊಸಬೆಳೆಕು ಆಶ್ರಮದ ತನುಲಾ ತರುಣ್, ವಿನಯಚಂದ್ರ ಸಾಸ್ತಾನ, ಪ್ರದೀಪ್, ಸೋನಿಯಾ ಅಜ್ಜರಕಾಡು ಇದ್ದರು.
ಉಡುಪಿ ನಗರಸಭೆ, ಫ್ಲವರ್ ವಿಷ್ಣು, ಸುಶೀಲ ರಾವ್ ಉಡುಪಿ, ಅಣ್ಣಪ್ಪ ಪೂಜಾರಿ ಕರಂಬಳ್ಳಿ ಸಹಕರಿಸಿದರು.