Sunday, July 3, 2022
Home ಸಮಾಚಾರ ರಾಜ್ಯ ವಾರ್ತೆ ಅಮಿತಾಬ್ ಬಚ್ಚನ್ ಕಾರು ಜಫ್ತಿ

ಅಮಿತಾಬ್ ಬಚ್ಚನ್ ಕಾರು ಜಫ್ತಿ

ಬೆಂಗಳೂರಿನಲ್ಲಿ ಅಮಿತಾಬ್ ಕಾರು ಜಫ್ತಿ

(ಸುದ್ದಿಕಿರಣ ವರದಿ)
ಬೆಂಗಳೂರು: ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಐಷಾರಾಮಿ ರೋಲ್ಸ್ ರಾಯ್ ಕಾರನ್ನು ಜಫ್ತಿ ಮಾಡಲಾಗಿದೆ.
ಬೆಂಗಳೂರಿನ ಯುಬಿ ಸಿಟಿಯಲ್ಲಿ ಅಮಿತಾಬ್ ಬಚ್ಚನ್ ಹೆಸರಿನಲ್ಲಿದ್ದ ಕಾರನ್ನು ಸೂಕ್ತ ದಾಖಲೆ ಇಲ್ಲದ ಕಾರಣಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಸೀಝ್ ಮಾಡಿದ್ದಾರೆ.

ಮಹಾರಾಷ್ಟ್ರದ ರಿಜಿಸ್ಟ್ರೇಷನ್ ಹೊಂದಿರುವ ನಟ ಅಮಿತಾಬ್ ಬಚ್ಚನ್ ಅವರ ಕಾರು ಇದಾಗಿದ್ದು, ಕಾರಿನ ಸೂಕ್ತ ದಾಖಲೆ ತಂದುಕೊಡುವಂತೆ ನೋಟಿಸ್ ನೀಡಲಾಗಿದೆ.

ಮೂರು ಐಶಾರಾಮಿ ಕಾರುಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇಲಾಖೆಯ ಹೆಚ್ಚುವರಿ ಆಯುಕ್ತ ನರೇಂದ್ರ ಹೋಲ್ಕರ್ ಮತ್ತು ಆರ್.ಟಿ.ಓ. ಇನ್ಸ್ ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಾರುಗಳನ್ನು ಜಫ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!