Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಅಳುಪರ ಕಾಲದ ಶಿಲಾ ಶಾಸನ ಪತ್ತೆ

ಅಳುಪರ ಕಾಲದ ಶಿಲಾ ಶಾಸನ ಪತ್ತೆ

ಸುದ್ದಿಕಿರಣ ವರದಿ
ಗುರುವಾರ, ಜನವರಿ 27

ಅಳುಪರ ಕಾಲದ ಶಿಲಾ ಶಾಸನ ಪತ್ತೆ
ಬ್ರಹ್ಮಾವರ: ಇಲ್ಲಿಗೆ ಸಮೀಪದ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಾಡಿ ಗ್ರಾಮದ ಹೆಬ್ಬಾರ್ ಒಳಲು ಪ್ರದೇಶದ ಗದ್ದೆಯಲ್ಲಿ ಆಳುಪ ಕಾಲದ ಶಾಸನ ಪತ್ತೆಯಾಗಿದೆ.

ಈ ಶಾಸನವನ್ನು ಇಲ್ಲಿನ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಅಧ್ಯಯನ ನಿರ್ದೇಶಕ ಪ್ರೊ. ಎಸ್. ಎ. ಕೃಷ್ಣಯ್ಯ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಹಾಗೂ ಸಿದ್ಧಾಪುರದ ಇಂದಿರಾ ಗಾಂಧಿ ವಸತಿ ಶಾಲೆಯ ಇಂಗ್ಲಿಷ್ ಸಹ ಶಿಕ್ಷಕ ರಾಘವೇಂದ್ರ ಶೆಣೈ ಅಧ್ಯಯನ ನಡೆಸಿದ್ದಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನ 4 ಅಡಿ ಎತ್ತರ ಹಾಗೂ 2 ಅಡಿ ಅಗಲವಿದ್ದು, ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವಿದ್ದು, ಅದರ ಇಕ್ಕೆಲಗಳಲ್ಲಿ ಎರಡು ಆಕಳು ಮತ್ತು ಕೈ ಮುಗಿದು ನಿಂತಿರುವ ವ್ಯಕ್ತಿಯ ಉಬ್ಬು ಕೆತ್ತನೆ ಇದೆ.

ಶಾಸನದ ಪ್ರಾರಂಭದಲ್ಲಿ `ಶ್ರೀಮತ್ಪಾಣ್ಡ್ಯ ಚಕ್ರವರ್ತಿ’ ಎಂಬ ಉಲ್ಲೇಖವಿದ್ದು, ಲಿಪಿ ಹಾಗೂ ಓದಲು ಸಾಧ್ಯವಾದ ಅಕ್ಷರದ ಆಧಾರದ ಮೇಲೆ ಇದು 12ನೇ ಶತಮಾನದ ದಾನ ಶಾಸನ ಎಂದು ಸಂಶೋಧನಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಮಾದರಿಯ ಶಾಸನವನ್ನು ಈ ಮೊದಲು ಬಿ. ಕುಶ ಆಚಾರ್ಯ ಕೃಷಿ ಭೂಮಿಯಲ್ಲಿ ಪತ್ತೆಮಾಡಲಾಗಿದೆ.

ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ನವೀನ್ ಕುಲಾಲ್ ಪಡುಬೆಳ್ಳೆ, ಬಿ. ಕುಶ ಆಚಾರ್ಯ ಸಹಕಾರ ನೀಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!