Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಆಗುಂಬೆ ಘಾಟ್ 4ನೇ ತಿರುವಿನಲ್ಲಿ ಭೂಕುಸಿತ; ಸಂಚಾರ ಸ್ಥಗಿತ

ಆಗುಂಬೆ ಘಾಟ್ 4ನೇ ತಿರುವಿನಲ್ಲಿ ಭೂಕುಸಿತ; ಸಂಚಾರ ಸ್ಥಗಿತ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 10

ಆಗುಂಬೆ ಘಾಟ್ 4ನೇ ತಿರುವಿನಲ್ಲಿ ಭೂಕುಸಿತ; ಸಂಚಾರ ಸ್ಥಗಿತ
ಹೆಬ್ರಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಆಗುಂಬೆ ಘಾಟಿಯ ಮೂರು ಮತ್ತು ನಾಲ್ಕನೇ ತಿರುವಿನ ಮಧ್ಯದಲ್ಲಿ ಭೂಕುಸಿತವುಂಟಾಗಿದ್ದು, ಮಣ್ಣು ಮತ್ತು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದೆ.
ರಸ್ತೆ ಸಂಚಾರ ಸ್ಥಗಿತಗೊಂಡಿದೆ‌.ಶನಿವಾರ ತಡರಾತ್ರಿ ಗುಡ್ಡ ಕುಸಿತವಾದ ಪರಿಣಾಮ ರಾತ್ರಿಯಿಂದಲೇ ವಾಹನ ಸಂಚಾರ ಸ್ಥಗಿತಗೊಂಡಿದ್ದು ಶಿವಮೊಗ್ಗ, ಆಗುಂಬೆ ಕಡೆಯಿಂದ ಉಡುಪಿಗೆ ಬರುವ ವಾಹನಗಳು ಸಿದ್ದಾಪುರ ಮೂಲಕ ಬರುತ್ತಿವೆ.

ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮಣ್ಣು ಮತ್ತು ಮರ ತೆರವುಗೊಳಿಸುವ ಕಾರ್ಯಾಚರಣೆ ಆರಂಭಗೊಂಡಿದ್ದು ಸುಮಾರು ಮೂರು ಗಂಟೆಗಳ ಬಳಿಕ ಸಂಚಾರಕ್ಕೆ ರಸ್ತೆ ಮುಕ್ತವಾಗುವ ಸಾಧ್ಯತೆ ಇದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!