Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊಡವೂರು ಬ್ರಾಹ್ಮಣ ಮಹಾಸಭಾ ವತಿಯಿಂದ ಆಟಿ ಕಷಾಯ ವಿತರಣೆ

ಕೊಡವೂರು ಬ್ರಾಹ್ಮಣ ಮಹಾಸಭಾ ವತಿಯಿಂದ ಆಟಿ ಕಷಾಯ ವಿತರಣೆ

ಸುದ್ದಿಕಿರಣ ವರದಿ
ಗುರುವಾರ, ಜುಲೈ 28

ಕೊಡವೂರು ಬ್ರಾಹ್ಮಣ ಮಹಾಸಭಾ ವತಿಯಿಂದ ಆಟಿ ಕಷಾಯ ವಿತರಣೆ
ಉಡುಪಿ: ಕೊಡವೂರು ಬ್ರಾಹ್ಮಣ ಮಹಾಸಭಾ ವತಿಯಿಂದ ಗುರುವಾರ ಆಟಿ ಅಮಾವಾಸ್ಯೆಯಂದು‌ ಸಾರ್ವಜನಿಕರಿಗೆ ಔಷಧೀಯ ಗುಣವುಳ್ಳ ಪಾಲೆ ಮರದ ಕೆತ್ತೆಯ ಕಷಾಯ ವಿತರಣೆ ವಿಪ್ರಶ್ರೀ ಸಭಾಂಗಣದಲ್ಲಿ ನಡೆಯಿತು.

ಮೂಡುಬೆಟ್ಟು ಉಪಾಧ್ಯಾಯ ಶುಶ್ರೂಷಾಲಯದ ಹಿರಿಯ ವೈದ್ಯ ಡಾ. ಮಂಜುನಾಥ ಉಪಾಧ್ಯಾಯ ಕಷಾಯ ವಿತರಿಸಿ, ಕಷಾಯ ಸೇವನೆಯ ಮಹತ್ವ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಕೊಡವೂರು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀನಿವಾಸ ಉಪಾಧ್ಯ, ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಕೋಶಾಧಿಕಾರಿ ಶ್ರೀಧರ ಶರ್ಮ, ಪದಾಧಿಕಾರಿಗಳಾದ ಚಂದ್ರಶೇಖರ ರಾವ್, ಸುಧೀರ್ ರಾವ್ ಮತ್ತು ಮಂಜುನಾಥ ಭಟ್ ಇದ್ದರು.

ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ, ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!