ಬೆಂಗಳೂರು: ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ನಡೆದಿರುವ ಅವ್ಯವಹಾರ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ವಹಿಸಲು ಆಗ್ರಹಿಸಿ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಸದಸ್ಯರು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಹಷರ್ಿ ಆನಂದ ಗುರೂಜಿ ಅವರನ್ನು ಭೇಟಿ ಮಾಡಿದರು.
ಮಹಾಸಂಘದ ರಾಜ್ಯ ಸಮನ್ವಯಕಾರ ಮೋಹನ ಗೌಡ ಮಾತನಾಡಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತದಲ್ಲಿ ನಡೆದ ಅವ್ಯವಹಾರಗಳನ್ನು ಮಾಹಿತಿ ಹಕ್ಕು ಮೂಲಕ ಪಡೆಯಲಾಗಿದ್ದು 21.80 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಮತ್ತು ಕೋಟ್ಯಂತರ ರೂ. ಮೌಲ್ಯದ ಚಿನ್ನ ಲೂಟಿಯಾಗಿದೆ ಎಂದು ಶಂಕಿಸಲಾಗಿದೆ. ದೇವಳ ವತಿಯಿಂದ ನೀಡಲಾದ ಕೋಟ್ಯಂತರ ರೂ. ಮುಂಗಡ ಹಣದ ಲೆಕ್ಕ ಇಲ್ಲ. ದೇವಳದ ಆಸ್ತಿಪಾಸ್ತಿ ಲೆಕ್ಕಪತ್ರದ ದಾಖಲೆಗಳು ಸರಿಯಾಗಿಲ್ಲದಿರುವ ಬಗ್ಗೆ ಆನಂದ ಗುರೂಜಿ ಗಮನಕ್ಕೆ ತರಲಾಯಿತು.
ಅದಕ್ಕೆ ಸ್ಪಂದಿಸಿದ ಮಹರ್ಷಿ ಆನಂದ ಗುರೂಜಿ, ಈ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.