Thursday, December 2, 2021
Home ಸಮಾಚಾರ ಅಪರಾಧ ತಲೆಮರೆಸಿಕೊಂಡ ಆರೋಪಿಗಳ ಬಂಧನ

ತಲೆಮರೆಸಿಕೊಂಡ ಆರೋಪಿಗಳ ಬಂಧನ

ತಲೆಮರೆಸಿಕೊಂಡ ಆರೋಪಿಗಳ ಬಂಧನ

ಕಾರ್ಕಳ, ನ. 13 (ಸುದ್ದಿಕಿರಣ ವರದಿ): ಕಳೆದ 14 ವರ್ಷದ ಹಿಂದೆ ವ್ಯಕ್ತಿಯ ಅಪಹರಣಗೈದು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿಯಾಗದೆ ತಲೆಮರೆಸಿಕೊಂಡ ಆರೋಪಿಗಳನ್ನು ಇಲ್ಲಿನ ನಗರ ಠಾಣೆ ಪೋಲೀಸರು ಹೊಳೆನರಸೀಪುರದಲ್ಲಿ ಬಂಧಿಸಿದ್ದಾರೆ.

2007ರ ಅಕ್ಟೋಬರ್ 14ರಂದು ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್ ಆಫೀಸ್ ಬಳಿ ಆರೋಪಿಗಳಾದ ಹನುಮಂತೇಗೌಡ ಅವರ ಮಗ ಯೋಗೀಶ, ಕೊರಿಯಣ್ಣ ಅವರ ಮಗ ಮಂಜುನಾಥ್, ನ್ಯಾಮನಹಳ್ಳಿ ಕಲ್ಲೇನಹಳ್ಳಿ ಕಟಾಯ ಹೊಳೆನರಸೀಪುರ ರಾಜು ಅವರ ಮಗ ವಸಂತ ಕಾರ್ಕಳ ಹಾರ್ಜಡ್ಡು ಕುಕ್ಕುಂದೂರು ಗ್ರಾಮದ ವೆಂಕಟೇಶ ಎಂಬಾತನನ್ನು ಅಪಹರಿಸಿಕೊಂಡು ಹೋಗಿ ಆರೋಪಿ ಯೋಗೀಶನ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ಹೊಡೆದು ಗಾಯಗೊಳಿಸಿದ್ದರು.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಯೋಗೀಶನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಡಿಸಿದ್ದರು.

ಉಳಿದ ಆರೋಪಿಗಳಾದ ಮಂಜು ಅಲಿಯಾಸ್ ಮಂಜುನಾಥ ಮತ್ತು ವಸಂತ ಅವರ ಬಂಧನವಾಗದೇ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿಗಳ ಬಂಧನಕ್ಕೆ ಎಲ್.ಪಿ.ಸಿ ವಾರಂಟ್ ಹೊರಡಿಸಿತ್ತು.

ಕಾರ್ಕಳ ಉಪ ವಿಭಾಗ ಡಿ.ವೈ.ಎಸ್.ಪಿ ವಿಜಯಪ್ರಸಾದ್, ಕಾರ್ಕಳ ಸರ್ಕಲ್ ಇನ್ಸ್ ಪೆಕ್ಟರ್ ಸಂಪತ್ ಕುಮಾರ್ ಮಾರ್ಗದರ್ಶನನದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪಿ.ಎಸ್.ಐ ಮಧು ಬಿ. ಆದೇಶದಂತೆ ಠಾಣಾ ಎ ಎಸ್.ಐ ರಾಜೇಶ್ ಪಿ., ಪ್ರೊಬೆಶನರಿ ಪಿ.ಎಸ್.ಐ ಮಹೇಶ್ ಕಂಬಿ, ಪಿ ಸಿ ಘನಶ್ಯಾಮ್ ಆರೋಪಿಗಳು ಹೊಳೆನರಸೀಪುರದಲ್ಲಿರುವ ಮಾಹಿತಿ ಪಡೆದು ಅಲ್ಲಿಗೆ ಹೋಗಿ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!