ಸುದ್ದಿಕಿರಣ ವರದಿ
ಶನಿವಾರ, ಜೂನ್ 18
ಇಂಜಿನಿಯರ್ ಆಗುವ ಭವ್ಯ ಆಸೆ
ಉಡುಪಿ: ಅಪ್ಪ ಅಮ್ಮನದು ಹಪ್ಪಳ, ಸಂಡಿಗೆ ಸಿದ್ಧಪಡಿಸಿ ಮಾರಾಟ ಮಾಡುವ ಕಾಯಕ. ಮಗಳು ಭವ್ಯ ನಾಯಕ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನಿ. ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಇಲ್ಲಿನ ಪುತ್ತೂರು ನಿವಾಸಿ ನಾರಾಯಣ ನಾಯಕ್ ಮತ್ತು ಉಮಾ ದಂಪತಿ ಪುತ್ರಿ.
ಈಗಾಗಲೇ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದು, ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಮಾಡುವ ಆಸೆ ಇದೆ ಎಂಬ ಆಶಯ ವ್ಯಕ್ತಪಡಿಸಿದರು.
ಪರೀಕ್ಷೆಗಾಗಿ ಹೆಚ್ಚಿನ ಸಿದ್ಧತೆ ಮಾಡಿಕೊಂಡಿಲ್ಲ. ವಿಷಯ ಮೊದಲು ಅರ್ಥವಾಗಬೇಕು ಎಂದು ಹೇಳಿದ ಭವ್ಯ, ಇಂಗ್ಲಿಷ್ ವಿಷಯ ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಲ್ಲಿ 100 ಅಂಕ ಲಭಿಸಿದೆ. ಇಂಗ್ಲಿಷ್ ಭಾಷೆ ಪತ್ರಿಕೆಯಲ್ಲಿ 97 ಅಂಕ ಲಭಿಸಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಲಭಿಸಿತ್ತು. ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡುವ ಬಯಕೆ ಇತ್ತು. ಪೋಷಕರು ಮತ್ತು ಕಾಲೇಜಿನಲ್ಲಿ ಉತ್ತಮ ಪ್ರೋತ್ಸಾಹ ಲಭಿಸಿದೆ ಎಂದರು.